Advertisement

KFD: ಶಿರಸಿ ತಾಲೂಕಿಗೂ ಒಕ್ಕರಿಸಿದ ಮಂಗನ ಕಾಯಿಲೆ; 68 ವರ್ಷದ ವ್ಯಕ್ತಿ ಬಲಿ

02:37 PM Mar 03, 2024 | Team Udayavani |

ಶಿರಸಿ: ಸಿದ್ದಾಪುರದ ಬಳಿಕ ಶಿರಸಿ ತಾಲೂಕಿಗೂ ಮಂಗನ ಕಾಯಿ ಒಕ್ಕರಿಸಿದ್ದು, 68 ವರ್ಷದ ವ್ಯಕ್ತಿಯೊಬ್ಬರನ್ನು ಬಲಿ ಪಡೆದುಕೊಂಡಿದೆ.

Advertisement

ಸಿದ್ದಾಪುರ ತಾಲೂಕಿನಲ್ಲಿ ಮೊದಲು ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ, ಇಬ್ಬರನ್ನು ಬಲಿ ಪಡೆದುಕೊಂಡಿತ್ತು. ಇದೀಗ ಶಿರಸಿ ತಾಲೂಕಿಗೂ ಒಕ್ಕರಿಸಿದ್ದು ಹತ್ತರಗಿಯ ನವಿಲಗಾರ ಗ್ರಾಮದ 68 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆ ಮೂಲಕ ಮಂಗನ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಫೆ.22ರಂದು‌ ‌ವಾಂತಿ ಜ್ವರ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ದೇಹ ಸ್ಪಂದಿಸದೇ ಇದ್ದಾಗ 27 ರಂದು‌ ಮಣಿಪಾಲ ಆಸ್ಪತ್ರೆಗೆ ಕಳಿಸಲಾಗಿತ್ತು. ಅಲ್ಲಿ ಅವರು ಮೃತರಾಗಿದ್ದಾರೆ.

ಸೋಮವಾರ ಶಾಸಕ ಭೀಮಣ್ಣ‌ ನಾಯ್ಕ ಬೆಳಿಗ್ಗೆ 8 ಗಂಟೆಗೆ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ‌ಫೋರ್ಸ್ ಸಭೆ ಕರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next