Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ವಿಭಾಗದಿಂದ ಘಟಕ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು ಜೂನ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರ ಸೂಚಿಸಿದೆ. ಇದಲ್ಲದೆ ಎಂ.ಆರ್.ಪಿ.ಎಲ್., ಇಂಡೇನ್ ಆಯಿಲ್ ಸೇರಿದಂತೆ ಇತರ ಆಯಿಲ್ ಕಂಪೆನಿಗಳು, ಇನ್ಫೋಸಿಸ್ ಸೇರಿದಂತೆ ಇತರ ಸಂಸ್ಥೆಗಳು ಸೇರಿ ರಾಜ್ಯದ ಇತರ 28 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಘಟಕ ನಿರ್ಮಾಣಕ್ಕೆ ಮುಂದೆ ಬಂದಿದೆ. ಹೀಗೆ ರಾಜ್ಯದಲ್ಲಿ ಒಟ್ಟು 68 ಘಟಕ ನಿರ್ಮಾಣವಾಗಲಿದೆ.
Related Articles
Advertisement
ಕೊಯಮತ್ತೂರಿಂದ ಟ್ರೈಡೆಂಟ್ ಕಂಪೆನಿ ಯಂತ್ರೋಪಕರಣ ಸರಬರಾಜು ಮಾಡಲಿದ್ದು, ಗಾಳಿಯಿಂದಲೇ ಆಮ್ಲ ಜನಕ ಹೀರಿಕೊಂಡು ಉತ್ಪಾದಿಸುವ ಘಟಕವಾಗಿದ್ದು, ವೆನಾÉಕ್ ಆಸ್ಪತ್ರೆಯಲ್ಲಿ 930 ಎಲ್.ಪಿ.ಎಂ.(ಲೀಟರ್ ಪರ್ ಮಿನಿಟ್)ನ ಘಟಕವನ್ನು ನಿರ್ಮಿಸುವ ಜವಾಬ್ದಾರಿ ಎಂ.ಆರ್.ಪಿ.ಎಲ್. ಕಂಪೆನಿ ವಹಿಸಿದೆ. ಸರಕಾರದಿಂದ 500 ಎಲ್.ಪಿ.ಎಂ. ಸಾಮರ್ಥ್ಯದ ಘಟಕ, ಬೈಂದೂರು ಹಾಗೂ ಬೆಳ್ತಂಗಡಿಯಲ್ಲಿ 390 ಎಲ್.ಪಿ.ಎಂ. ಸಾಮರ್ಥ್ಯದ ಘಟಕ ನಿರ್ಮಾಣವಾಗಲಿದೆ. ಪ್ರತಿ ನಿತ್ಯ 38 ಎಂ.ಟಿ. ಆಕ್ಸಿಜನ್ ತಯಾರಿಸಬಹುದಾಗಿದ್ದು, 56 ಹಾಸಿಗೆಗೆ ನಿರಂತರ ಆಮ್ಲಜನಕ ಪೂರೈಸಬಲ್ಲದಾಗಿದೆ. 500 ಎಲ್.ಪಿ.ಎಂ. ಘಟಕವು 80 ಹಾಸಿಗೆ ಹಾಗೂ 930 ಎಲ್.ಪಿ.ಎಂ. ಸಾಮರ್ಥ್ಯದ ಘಟಕವು 100 ಹಾಸಿಗೆಗಳಿಗೆ ನಿರಂತರ ಆಮ್ಲಜನಕ ನೀಡಬಲ್ಲವು.
ಇದರಿಂದಾಗಿ ಮೆಡಿಕಲ್ ಆಕ್ಸಿಜನ್ ಸರಬರಾಜುದಾರರ ಮೇಲೆ ಅವ ಲಂಬಿರಾಗುವ ಹೊರೆ ತಗ್ಗುವ ಜತೆಗೆ ಗುಡ್ಡಗಾಡು ಮತ್ತು ಗ್ರಾಮೀಣ ಭಾಗಗಳಲ್ಲಿ ಮೆಡಿಕಲ್ ಆಕ್ಸಿಜನ್ ಒದಗಿಸುವುದು ಸುಲಭವಾಗಲಿದೆ. ಸದ್ಯ ಮಂಗಳೂರು ಮತ್ತು ಉಡುಪಿಯಲ್ಲಿ 6,000 ಲೀಟರ್‌ನ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಮಾತ್ರ ಇದ್ದು ಇದಕ್ಕೆ ಪರ್ಯಾಯವಾಗಿ ನೂತನ ಘಟಕವು ಕೊರೊನಾ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಲಿದೆ.
ರಾಜ್ಯದಲ್ಲೇ 10 ಜಿಲ್ಲಾಸ್ಪತ್ರೆ ಹಾಗೂ 30 ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಲಿದೆ. ಖಾಸಗಿ ಸಂಸ್ಥೆಗಳು ಹೆಚ್ಚಿನ ಕಡೆ ಕೊಡುಗೆ ನೀಡಲು ಮುಂದಾಗಿವೆ. ಜೂನ್ ತಿಂಗಳ ಒಳಗಾಗಿ ಘಟಕ ಸೇವೆಗೆ ಸಿದ್ಧವಾಗಲಿದ್ದು, ಕೋವಿಡ್ ಮೂರನೇ ಅಲೆ ಎದುರಿಸಲು ಘಟಕಗಳು ಆರೋಗ್ಯ ಇಲಾಖೆಗೆ ಬಲ ತುಂಬಲಿದೆ. –ಶ್ರೀನಾಥ್ ಎಂ.ಬಿ., ಕಾರ್ಯಪಾಲಕ ಎಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ಮೈಸೂರು ವಿಭಾಗ