Advertisement

ಚಾಮರಾಜನಗರ: ಕೋವಿಡ್‌ನಿಂದ ಮೂವರ ಸಾವು: 68 ಹೊಸ ಪ್ರಕರಣ ಪತ್ತೆ

06:39 PM Sep 18, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 68 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.

Advertisement

ಜಿಲ್ಲೆಯಲ್ಲಿ ಇಂದು 115 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ಮೂವರು ಸೋಂಕಿತರು ಮೃತಪಟ್ಟಿದ್ದಾರೆ.

ಗುಂಡ್ಲುಪೇಟೆ ತಾಲೂಕು ಬೊಮ್ಮನಹಳ್ಳಿ ಗ್ರಾಮದ 70 ವರ್ಷದ ವೃದ್ಧ ಸೆ. 16ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಸೆ. 17ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ನಗರದ 73 ವರ್ಷದ ವೃದ್ಧ ಸೆ. 16ರಂದು ಹೃದ್ರೋಗದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮರಣಾನಂತರ ಪರೀಕ್ಷಿಸಿದಾಗ ಅವರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.

ನಗರದ 58 ವರ್ಷದ ವ್ಯಕ್ತಿ ಸೆ. 12ರಂದು ಉಸಿರಾಟದ ಸಮಸ್ಯೆಯಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾರೆ ಬಳಿಕ ಅವರನ್ನು ಪರೀಕ್ಷಿಸಿದಾಗ ಆ ವ್ಯಕ್ತಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.

Advertisement

ಚಾಮರಾಜನಗರ ತಾಲೂಕಿನ 29, ಗುಂಡ್ಲುಪೇಟೆ ತಾಲೂಕಿನ 11, ಕೊಳ್ಳೇಗಾಲ ತಾಲೂಕಿನ 19, ಯಳಂದೂರು ತಾಲೂಕಿನ 2, ಹನೂರು ತಾಲೂಕಿನ 04 ಹಾಗೂ ಹೊರ ಜಿಲ್ಲೆಯ 03 ಮಂದಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ 585 ಸಕ್ರಿಯ ಪ್ರಕರಣಗಳಿವೆ.  ಒಟ್ಟು 2689 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 3346 ಪ್ರಕರಣಗಳು ದೃಢಪಟ್ಟಿವೆ. 25 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  227 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.  ಶುಕ್ರವಾರ 393 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next