Advertisement

Vijayapura ಜಿಲ್ಲೆಯ ವೈದ್ಯ ಸೇರಿ ಇಬ್ಬರಿಗೆ ಆನ್‍ಲೈನ್ ವಂಚನೆ : 68.77 ಲಕ್ಷ ರೂ. ಪಂಗನಾಮ

02:27 PM May 22, 2024 | Vishnudas Patil |

ವಿಜಯಪುರ : ಆನ್‍ಲೈನ್ ವಂಚನೆ ಕೃತ್ಯವನ್ನೇ ದಂಧೆ ಮಾಡಿಕೊಂಡು ದೇಶದಾದ್ಯಂತ 502 ವಂಚನೆ ಕೃತ್ಯ ಎಸಗಿದ್ದ ಅಂತರಾಜ್ಯ ಖತರನಾಕ್ ಆನ್‍ಲೈನ್ ನಾಲ್ವರು ವಂಚಕರ ತಂಡವನ್ನು ಬಲೆಗೆ ಕೆಡಹುವಲ್ಲಿ ವಿಜಯಪುರ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬುಧವಾರ ನಗರದಲ್ಲಿ ಇಡೀ ಪ್ರಕರಣದ ವಿವರ ಬಿಚ್ಚಿಟ್ಟ ಎಸ್ಪಿ ಋಷಿಕೇಶ ಭಗವಾನ್, ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಅತ್ಯಂತ ದಕ್ಷತೆಯಿಂದ ಆನ್‍ಲೈನ್ ವಂಚನಾ ಜಾಲವನ್ನು ಬೇಧಿಸಿ, ವಂಚಕರನ್ನು ಬಂಧಿಸುವಲ್ಲಿ ದಕ್ಷತೆ ಮೆರೆದಿದ್ದಾರೆ ಎಂದರು.

ವಿಜಯಪುರ ನಗರದ ಪ್ರಖ್ಯಾತ ವೈದ್ಯರಾದ ಡಾ.ಅನಿರುದ್ಧ ಉಮರ್ಜಿ ಅವರಿಗೆ ಕರೆ ಮಾಡಿದ ವಂಚಕರ ತಂಡ, ನಿಮಗೆ ಕಾಬೂಲ್‍ನಿಂ ಫಿಡೆಕ್ಸ್ ಕೋರಿಯರ್ ಬಂದಿದ್ದು, ಅರದಲ್ಲಿ ಕಾನೂನು ಭಾಹಿರವಾಗಿ ಮಾದಕ ವಸ್ತು, ಅಂತರಾಷ್ಟ್ರೀಯ 15 ಸಿಮ್ ಕಾರ್ಡ್‍ಗಳು ಹಾಗೂ 950 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಕಳಿಸಲಾಗಿದೆ. ಈ ಬಗ್ಗೆ ಮಂಬೈನ ನಾರ್ಕೋಟಿಕ್ಸ್ ಕ್ರೈಂ ಶಾಖೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ.

ಸದರಿ ಅಪರಾಧ ಕೃತ್ಯದಿಂದ ಮುಕ್ತಿಗೊಳಿಸಲು ಹಣ ಕೊಡಬೇಕು ಎಂದು ನಿಮ್ಮ ಎಫ್.ಡಿ. ಖಾತೆಯಲ್ಲಿರುವ 54 ಲಕ್ಷ ರೂ. ಹಣ ಕೊಡಬೇಕೆಂದು ಬೆರಿಸಿ ತಾವು ಹೊಂದಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದರು.

ಮತ್ತೊಂದೆಡೆ ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಬಬನ್ ನಾಮದೇವ ಚವ್ಹಾಣ ಎಂಬ ಯುವಕನಿಗೆ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ 14,77,135 ರೂ. ಹಣವನ್ನು ಆನ್‍ಲೈನ್ ಮೂಲಕ ಹಾಕಿಸಿಕೊಂಡು ವಂಚಿಸಿದ್ದರು.

Advertisement

ಈ ಎರಡೂ ಪ್ರಕರಣಗಳ ಕುರಿತು ದೂರು ದಾಖಲಾಗುತ್ತಲೇ ತನಿಖೆಗೆ ಇಳಿದ ವಿಜಯಪುರ ಸಿಇಎನ್ ಕ್ರೈಂ ಬ್ಯಾಂಚ್ ಸಿಪಿಐ ಸುನಿಲಕುಮಾರ ನಂದೇಶ್ವರ ನೇತೃತ್ವದ ತನಿಖಾ ತಂಡ ಆನ್‍ಲೈನ್ ವಂಚಕ ಕೃತ್ಯವನ್ನೇ ಉದ್ಯೋಘ ಮಾಡಿಕೊಂಡಿದ್ದ ನಾಲ್ವರ ತಂಡವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಬಂಧಿತರು ಹರಿಯಾಣ ರಾಜ್ಯದ ಕುರುಕ್ಷೇತ್ರ ಮೂಲದ ರಾಜೀವ ವಾಲಿಯಾ, ರಾಜಸ್ಥಾನ ರಾಜ್ಯದ ಉದಯಪುರ ಜಿಲ್ಲೆ ಲಸದಿಯಾ ಮೂಲದ ರಾಕೇಶಕುಮಾರ ಟೈಲರ್, ಉದಯಪುರದ ಕರಣ ಯಾದವ ಹಾಗೂ ಸುರೇಂದ್ರಸಿಂಗ್ ಎಂಬ ನಾಲ್ವರನ್ನು ಬಂಧಿಸಿ ಎಳೆದು ತಂದಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ವಂಚಕರ ಬ್ರಹಾಂಡ ವಂಚನೆಯ ಚಾಲ ಕಳಚಿಕೊಂಡಿದೆ. ಸದರಿ ಬಂಧಿತರು ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಇಡೀ ದೇಶದಲ್ಲಿ ಇದೇ ರೀತಿ 502 ವಂಚನೆಯ ಕೃತ್ಯ ಎಸಗಿದ್ದಾಗಿ ಬಾಯಿ ಬಿಟ್ಟಿದ್ದಾರೆ.

ಬಂಧಿತರು ಆನ್‍ಲೈನ್ ವಂಚನೆ ಮಾಡುವ ಉದ್ದೇಶದಿಂದಲೇ ಅನಾಮಧೇಯರ ಹೆಸರಿನಲ್ಲಿ ದೇಶದ ವಿವಿಧ ಕಡೆಗಳಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ 170 ಖಾತೆಗಳನ್ನು ತೆರೆದು, ಆನ್‍ಲೈನ್ ಮೂಲಕ ವಂಚಿದಿ ಹಣವನ್ನು ತಮ್ಮ ನಕಲಿ ಖಾತೆಗೆಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಆನ್ ಲೈನ್ ವಂಚನೆಯ ಕೃತ್ಯಕ್ಕೆ ಬಳಸಲು ಅನಾಮಧೇಯರ ಹೆಸರಿನಲ್ಲಿ 120 ಸಿಮ್ ಕಾರ್ಡ್ ಗಳನ್ನು ಖರೀದಿಸಿದ್ದರು.

ಆನ್‍ಲೈನ್ ವಂಚನೆ ಮೂಲಕ ವಿಜಯಪುರದ ಎರಡು ಪ್ರಕರಣಗಳಲ್ಲಿ ವಂಚಿಸಿದ್ದ 68,77,135 ರೂ.ಗಳಲ್ಲಿ ಬಂಧಿತರಿಂದ ವಶಕ್ಕೆ ಪಡೆದಿರುವ 40 ಲಕ್ಷ ರೂ. ಹಣವನ್ನು ಬಾಧಿತರಿಗೆ ಹಿದಿರುಗಿಸಿದ್ದಾರೆ. ಇತರೆ ಹಣವನ್ನು ಪಡೆಯಲಾಗದಂತೆ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದೆ ಎಂದು ಎಸ್ಪಿ ಋಷಿಕೇಶ ಭಗವಾನ್ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next