Advertisement

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಸ್ಯಾಂಡಲ್ ವುಡ್ ಗೆ 11 ರಾಷ್ಟ್ರ ಪ್ರಶಸ್ತಿ

09:50 AM Dec 24, 2019 | Nagendra Trasi |

ನವದೆಹಲಿ: ಪ್ರಸಕ್ತ ಸಾಲಿನ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Advertisement

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾರಂಗ ಹನ್ನೊಂದು ಪ್ರಶಸ್ತಿಯನ್ನು ಗೆದ್ದುಗೊಂಡಿದೆ. ಸ್ಯಾಂಡಲ್ ವುಡ್ ನ ನಾತಿ ಚರಾಮಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

ಸಂಪ್ರದಾಯದ ಪ್ರಕಾರ ರಾಷ್ಟ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರದಾನ ಮಾಡಬೇಕಿತ್ತು. ಆದರೆ ಈ ಬಾರಿ ಕೋವಿಂದ್ ಅವರ ಅನುಪಸ್ಥಿತಿಯಲ್ಲಿ ಉಪರಾಷ್ಟ್ರಪತಿ ನಾಯ್ಡು ಪ್ರಶಸ್ತಿ ನೀಡಲಿದ್ದಾರೆ. ಭಾರತೀಯ ಸಿನಿಮಾರಂಗದ ಪರಮೋಚ್ಛ ಪ್ರಶಸ್ತಿಯಾದ 50ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಪ್ರದಾನ ಮಾಡಲಿದ್ದಾರೆ.

ಕನ್ನಡ ಯಾವ ಸಿನಿಮಾಕ್ಕೆ ಪ್ರಶಸ್ತಿ:

ಸ್ಯಾಂಡಲ್ ವುಡ್ ನ ನಾತಿಚರಾಮಿಗೆ ಅತ್ಯುತ್ತಮ ಸಿನಿಮಾ, ಉತ್ತಮ ಸಾಹಿತ್ಯ, ಉತ್ತಮ ಸಂಕಲನ, ಉತ್ತಮ ಗಾಯಕಿ (ಬಿಂದು ಮಾಲಿನಿ) ಹಾಗೂ ಶ್ರುತಿ ಹರಿಹರನ್ ಗೆ ವಿಶೇಷ ಜ್ಯೂರಿ ಪ್ರಶಸ್ತಿ ಸೇರಿದಂತೆ ಒಟ್ಟು ಐದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಕೆಜಿಎಫ್ ಚಾಪ್ಟರ್ 1 ಅತ್ಯುತ್ತಮ ಸಾಹಸ ಹಾಗೂ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅತ್ಯುತ್ತಮ ಮಕ್ಕಳ ಚಿತ್ರ, ಒಂದಲ್ಲಾ ಎರಡಲ್ಲಾ ಚಿತ್ರದ ಪಿವಿ ರೋಹಿತ್ ಅತ್ಯುತ್ತಮ ಬಾಲ ನಟ, ಒಂದಲ್ಲಾ ಎರಡಲ್ಲಾ ಸಿನಿಮಾಕ್ಕೆ ನರ್ಗಿಸ್ ದತ್ ಪ್ರಶಸ್ತಿಗೆ ಭಾಜನವಾಗಿದೆ. ಸರಳ ವಿರಳ ಸಾಕ್ಷ್ಯ ಚಿತ್ರ ಅತ್ಯುತ್ತಮ ಶೈಕ್ಷಣಿಕ ಸಿನಿಮಾ ಪ್ರಶಸ್ತಿ ಪಡೆದಿದೆ.

ಉರಿ “ದ ಸರ್ಜಿಕಲ್ ಸ್ಟ್ರೈಕ್” ಸಿನಿಮಾದ ವಿಕಿ ಕೌಶಲ್ ಹಾಗೂ ಅಂಧಾಧುನ್ ಸಿನಿಮಾದ ಆಯುಷ್ಮಾನ್ ಖುರಾನಾ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. “ಮಹಾನಟಿ” ತೆಲುಗು ಸಿನಿಮಾದ ನಟಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮರಾಠಿಯ “ಪಾನಿ” ಅತ್ಯುತ್ತಮ ಪರಿಸರ ಪ್ರಶಸ್ತಿ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next