Advertisement

ರಾಜ್ಯಕ್ಕೆ ಸಿಗಲಿದೆ 660 ಹೆಚ್ಚು ವೈದ್ಯಕೀಯ ಸೀಟು : ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ

12:45 AM Feb 11, 2021 | sudhir |

ಬೆಂಗಳೂರು: ರಾಜ್ಯದ ಸರಕಾರಿ ಕೋಟಾದ ವೈದ್ಯಕೀಯ ಸೀಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗಣನೀಯ ಏರಿಕೆಯಾಗಲಿದೆ. 1 ಖಾಸಗಿ ಹಾಗೂ 4 ಸರಕಾರಿ ವೈದ್ಯಕೀಯ ಕಾಲೇಜುಗಳು 2021-22ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಗೆ ಸಿದ್ಧವಾಗಿವೆ. ಇದರಿಂದ 660 ಸರಕಾರಿ ಸೀಟುಗಳು ಹೆಚ್ಚುವರಿಯಾಗಿ ಸಿಗಲಿವೆ.

Advertisement

2021-22ರಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ 8,895ಕ್ಕೆ ಹಾಗೂ ಸರಕಾರಿ ಕೋಟಾದ ಸೀಟುಗಳ ಸಂಖ್ಯೆ 3,640ಕ್ಕೆ ಏರಿಕೆಯಾಗಿದೆ.
ಸದ್ಯ ರಾಜ್ಯದಲ್ಲಿ 8,145 ಎಂಬಿಬಿಎಸ್‌ ಸೀಟುಗಳಿವೆ. ಇದರಲ್ಲಿ 2,980 ಸರಕಾರಿ ಕೋಟಾದವು. 2021-22ನೇ ಸಾಲಿಗೆ ಒಟ್ಟು 660 ಸೀಟುಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರಲ್ಲಿ ಸರಕಾರಿ ಸೀಟುಗಳೇ ಹೆಚ್ಚು. 4 ಸರಕಾರಿ ಕಾಲೇಜುಗಳಿಂದ 600 ಹಾಗೂ ಇನ್ನೊಂದು ಖಾಸಗಿ ಕಾಲೇಜಿನಿಂದ ಶೇ. 40ರಷ್ಟು ಸೀಟುಗಳು ಅಂದರೆ 60 ಸೀಟುಗಳು ಸಿಗಲಿವೆ.

ನೀಟ್‌ ರ್‍ಯಾಂಕಿಂಗ್‌ ಆಧಾರದಲ್ಲಿ ವೈದ್ಯಕೀಯ ಸೀಟು ಹಂಚಿಕೆ ನಡೆಯುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಸೀಟು ಹಂಚಿಕೆಯಾದರೂ ರಾಜ್ಯದ ಕೋಟದ ಸೀಟುಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಹಂಚಿಕೆಯಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2021 – 22 ನೇ ಸಾಲಿನಲ್ಲಿ
8,895  : ಒಟ್ಟು ಸೀಟುಗಳು
3,640 : ಸರಕಾರಿ ಕೋಟಾದ ಸೀಟುಗಳು

ಮುಂದಿನ ಶೈಕ್ಷಣಿಕ ವರ್ಷಕ್ಕೆ ನಾಲ್ಕು ಸರಕಾರಿ ಹಾಗೂ ಒಂದು ಖಾಸಗಿ ಸಹಿತ 5 ವೈದ್ಯಕೀಯ ಕಾಲೇಜು ದಾಖಲಾತಿ ಆರಂಭಿಸಲಿವೆ. ಇದರಿಂದ 660 ಸರಕಾರಿ ಸೀಟು ಹೆಚ್ಚುವರಿಯಾಗಿ ಸಿಗಲಿದೆ. ನೀಟ್‌ ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
-ಡಾ| ಎಸ್‌. ಸಚ್ಚಿದಾನಂದ, ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಕುಲಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next