Advertisement

Jeff Bezos: 660 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ ಜೆಫ್ ಬೆಜೋಸ್‌

09:39 PM Oct 14, 2023 | Team Udayavani |

ನವದೆಹಲಿ: ಇ ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ ಅವರು ಅಮೆರಿಕದ ಫ್ಲಾರಿಡಾದಲ್ಲಿ 660 ಕೋಟಿ ರೂ. (79 ಮಿಲಿಯನ್‌ ಡಾಲರ್‌) ಮೌಲ್ಯದ ಏಳು ಬೆಡ್‌ರೂಮ್‌ ಮನೆ ಖರೀದಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. 2 ಸಾವಿರನೇ ಇಸ್ವಿಯಲ್ಲಿ ನಿರ್ಮಾಣಗೊಂಡ ಈ ವೈಭವೋಪೇತ ಬಂಗಲೆ ಎರಡು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅದರಲ್ಲಿ ಈಜುಕೊಳ, ಹೋಮ್‌ ಥಿಯೇಟರ್‌ ಸೇರಿದಂತೆ ಹಲವು ಅದ್ದೂರಿ ವ್ಯವಸ್ಥೆಗಳು ಇವೆ ಎಂದು ಹೇಳಲಾಗುತ್ತದೆ.

Advertisement

ಅವರ ನೆರೆಯವರಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ ಇವಾಂಕಾ ಟ್ರಂಪ್‌, ಸಂಗೀತ ನಿರ್ದೇಶಕ ಜ್ಯೂಲಿಯೋ ಇಗ್ಲೆಷಿಯಸ್‌ ಸೇರಿದಂತೆ ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next