Advertisement
ಈ ನಡುವೆ ಕೋವಿಡ್ 19 ಸೋಂಕಿಗೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Related Articles
ಮಂಡ್ಯ 22, ಮಳವಳ್ಳಿ 4, ಪಾಂಡವಪುರ 9, ಶ್ರೀರಂಗಪಟ್ಟಣ 8, ಕೆ.ಆರ್.ಪೇಟೆ 18 ಹಾಗೂ ನಾಗಮಂಗಲದ 8 ಮಂದಿ ಸೇರಿದಂತೆ ಒಟ್ಟು 66 ಜನರಿಗೆ ಸೋಂಕು ತಗುಲಿದೆ.
Advertisement
ಇದೀಗ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪೀಡಿತರ ಒಟ್ಟು ಸಂಖ್ಯೆ 8904ಕ್ಕೆ ಏರಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 395, ಖಾಸಗಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 92, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 126 ಹಾಗೂ ಹೋಂ ಐಸೋಲೇಷನ್‌ನಲ್ಲಿ 1282 ಮಂದಿ ಇದ್ದಾರೆ.
1206 ಮಂದಿಗೆ ಪರೀಕ್ಷೆ:ಶುಕ್ರವಾರ ಜಿಲ್ಲೆಯಲ್ಲಿ 1206 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. 546 ರ‍್ಯಾಪಿಡ್ ಹಾಗೂ 660 ಆರ್‌ಟಿಪಿಸಿಆರ್ ಪರೀಕ್ಷೆಗೊಳಗಾಗಿದ್ದರು. 108 ಮಂದಿ ಬಿಡುಗಡೆ:
ಮಂಡ್ಯ 75, ಮದ್ದೂರು 6, ಮಳವಳ್ಳಿ 1, ಪಾಂಡವಪುರ 2, ಶ್ರೀರಂಗಪಟ್ಟಣ 14, ನಾಗಮಂಗಲ 8 ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 108 ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೂ 6919 ಮಂದಿ ಬಿಡುಗಡೆಯಾಗಿದ್ದು, 1895 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಟಿ. ಎನ್. ಧನಂಜಯ ಅವರು ಮಾಹಿತಿ ನೀಡಿದ್ದಾರೆ.