Advertisement
ದೇಶ-ವಿದೇಶಗಳಿಂದ ಆಗಮಿಸಿದ ಭಕ್ತರು ಜು. 26ರಿಂದ 28ರ ವರೆಗೆ ಮಂದಿರದ ದೇಣಿಗೆ ಪೆಟ್ಟಿಗೆಗಳಲ್ಲಿ 3.83 ಕೋ.ರೂ.ಗಳ ನಗದು ದೇಣಿಗೆ ನೀಡಿದರು ಎಂದು ಶಿರ್ಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಎಒ) ರುಬಾಲ್ ಅಗರ್ವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
Related Articles
ಕಳೆದ ವರ್ಷದ ಗುರುಪೂರ್ಣಿಮೆ ಆಚರಣೆಯ ತುಲನೆಯಲ್ಲಿ ಈ ವರ್ಷ ಸುಮಾರು 1.10 ಕೋ.ರೂ.ಗಿಂತಲೂ ಅಧಿಕ ಮೊತ್ತದ ದೇಣಿಗೆಗಳನ್ನು ಪಡೆಯಲಾಗಿದೆ. ಕಳೆದ ವರ್ಷ ಮೂರು ದಿನಗಳ ಉತ್ಸವ ಆಚರಣೆಯ ವೇಳೆ 5.52 ಕೋ.ರೂ.ಗಳ ದೇಣಿಗೆ ಸಂಗ್ರಹವಾಗಿತ್ತು.
Advertisement
ಶಿರ್ಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ತನ್ನ ಖಜಾನೆಯಲ್ಲಿ 425 ಕೆ.ಜಿ. ಚಿನ್ನ ಹಾಗೂ 4,800 ಕೆ.ಜಿ. ಬೆಳ್ಳಿ ಆಭರಣಗಳನ್ನು ಹೊಂದಿರುವ ಹೊರತಾಗಿ ವಿವಿಧ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಒಟ್ಟು 2,180 ಕೋ.ರೂ.ಗಳ ಸ್ಥಿರ ಠೇವಣಿಗಳನ್ನು ಹೊಂದಿದೆ ಎಂದು ಅಗರ್ವಾಲ್ ಅವರು ಹೇಳಿದ್ದಾರೆ.
ಈ ಬಾರಿಯ ಗುರುಪೂರ್ಣಿಮೆ ಆಚರಣೆಯ ವೇಳೆ ದೇಶ ಹಾಗೂ ವಿದೇಶಗಳ ವಿವಿಧ ಭಾಗಗಳಿಂದ ಸುಮಾರು 3 ಲಕ್ಷ ಭಕ್ತರು ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿದ್ದರು ಎಂದವರು ತಿಳಿಸಿದ್ದಾರೆ.