Advertisement

ದುಬೈನಿಂದ ಬಂದಾತನಿಂದ 76 ಲಕ್ಷ ರೂ. ಮೌಲ್ಯದ ಚಿನ್ನ ವಶ, ಅರೆಸ್ಟ್‌

05:02 PM Jul 31, 2017 | Team Udayavani |

ಹೊಸದಿಲ್ಲಿ : ಸುಮಾರು 76 ಲಕ್ಷ ರೂ. ಮೌಲ್ಯದ ಚಿನ್ನವನ್ನು ದೇಶದೊಳಗೆ ಕಳ್ಳಸಾಗಣೆ ಮಾಡಿ ತರುತ್ತಿದ್ದ 64 ವರ್ಷ ಪ್ರಾಯದ ವ್ಯಕ್ತಿಯೋರ್ವನನ್ನು ಕಸ್ಟಮ್ಸ್‌ ಅಧಿಕಾರಿಗಳು ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 

Advertisement

ದುಬೈನಿಂದ ಬಂದ ಈ ವ್ಯಕ್ತಿಯು ಚಿನ್ನವನ್ನು ವಾಟರ್‌ ಹೀಟರ್‌ ಮತ್ತು ಮೀಟ್‌ ಮಿನ್ಸರ್‌ನ ಟ್ರಾನ್ಸ್‌ಫಾರ್ಮರ್‌ನಲ್ಲಿ ಅಡಗಿಸಿಟ್ಟಿದ್ದುದನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದರು. ಚಿನ್ನವನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದರು. 

ವ್ಯಕ್ತಿಯು ಚಿನ್ನವನ್ನು ತಾನು ತಂದಿದ್ದ ಉಪಕರಣಗಳಲ್ಲಿನ ಹಾಳೆಯಂತೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಳಸಿದ್ದ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next