ಸೋಮವಾರ ನಡೆವ ಸೂರ್ಯಗ್ರಹಣ ಸಂದರ್ಭ ಅದರ ವಿಶೇಷ ದರ್ಶನಕ್ಕೆ ಇದೀಗ ಅಮೆರಿಕದ ಖಾಸಗಿ ವಿಮಾನಯಾನ ಸಂಸ್ಥೆಗಳು ಸಿದ್ಧಗೊಂಡಿವೆ. ಅವುಗಳು ಸೂರ್ಯಗ್ರಹಣವನ್ನು ಐಷಾರಾಮಿ ವಿಮಾನದಲ್ಲಿ ಪ್ರಯಾಣಿಕರಿಗೆ ತೋರಿಸಲಿದ್ದು, ಇದೀಗ ಟಿಕೆಟ್ ಬೆಲೆ 10 ಸಾವಿರ ಡಾಲರ್ ಅಂದರೆ ಸುಮಾರು 64 ಲಕ್ಷ ರೂ. ತಲುಪಿದೆ. ಜನರೂ ಈ ವಿಶೇಷ ಅನುಭವಕ್ಕೆ ಸೀಟುಗಳನ್ನು ಬುಕ್ ಮಾಡಿದ್ದಾರೆ.
Advertisement
ಗ್ರಹಣ ವೀಕ್ಷಣೆ, ವೀಕ್ಷಕ ವಿವರಣೆ!: ವಿಶೇಷ ವಿಮಾನಗಳಲ್ಲಿ ಕಿಟಕಿ ಬದಿ ಕೂತು ಗ್ರಹಣದ ವಿವಿಧ ಹಂತ ವೀಕ್ಷಣೆಯೊಂದಿಗೆ ಪರಿಣತ ಖಗೋಳ ತಜ್ಞರಿಂದ ವೀಕ್ಷಕ ವಿವರಣೆಯೂ ಇರಲಿದೆಯಂತೆ. ಜೊತೆಗೆ ವಿಮಾನದಲ್ಲಿ ದೂರದರ್ಶಕ ಮತ್ತು ಕಣ್ಣಿಗೆ ಹಾನಿಯಾಗದಂತೆ ವಿಶೇಷ ಕನ್ನಡ/ಗಾಜಿನ ವ್ಯವಸ್ಥೆ ಮಾಡಲಾಗಿದೆಯಂತೆ.
ಸೋಮವಾರ ಖಗ್ರಾಸ ಸೂರ್ಯ ಗ್ರಹಣ ನಡೆಯಲಿದ್ದು, ಇದು ತುಂಬಾ ವಿಶೇಷದ್ದು. ಕಾರಣ, ಇಡೀ ಅಮೆರಿಕ ಒಂದು ಬಾರಿ ಕತ್ತಲಾಗಲಿದೆ. ಒಟ್ಟು ಒಂದೂವರೆ ಗಂಟೆಗಳ ಗ್ರಹಣ ಅವಧಿ ಇದ್ದು, ಚಂದ್ರ ಸೂರ್ಯನನ್ನು ಸಂಪೂರ್ಣ ಆವರಿಸಲಿ ದ್ದಾನೆ. ಪೂರ್ಣ ಸೂರ್ಯ ಗ್ರಹಣ ಸಂದರ್ಭ ಸೂರ್ಯನಿಂದ ಹೊರ ಹೊಮ್ಮುವ ಸೌರ ಕಿರಣ, ಭಾರೀ ಶಕ್ತಿ, ಪ್ಲಾಸ್ಮಾ ಕಿರಣಗಳ ಅಧ್ಯ ಯ ನಕ್ಕೆ ವಿಜ್ಞಾನಿಗಳೂ ಕಾತರರಾಗಿದ್ದಾರೆ. ಗ್ರಹಣಗಳಲ್ಲಿ ಶೇ.40ರಷ್ಟು ಮಾತ್ರ ಪೂರ್ಣ ಸೂರ್ಯಗ್ರಹಣವಾಗಿದ್ದು, ಸೂರ್ಯ-ಚಂದ್ರ ಒಂದೇ ಕೋನದಲ್ಲಿ ಬರುವುದು ಅಪರೂಪ.
Related Articles
ಖಗ್ರಾಸ ಸೂರ್ಯ ಗ್ರಹಣ ವೇಳೆ ಪ್ರಾಣಿಗಳ ವರ್ತನೆಯಲ್ಲೂ ಬದಲಾವಣೆಯಾಗಲಿದೆ. ಚಂದ್ರ ಸೂರ್ಯನನ್ನು ಆವರಿಸುತ್ತಿದ್ದಂತೆ, ಕತ್ತಲಾಗಿ ಪ್ರಾಣಿಗಳಿಗೆ ಗೊಂದಲವಾಗಲಿದೆ. ಬಹುತೇಕ ಪ್ರಾಣಿ ಪಕ್ಷಿಗಳು ಸಂಜೆ ತೋರಿಸುವ ವರ್ತನೆಗಳನ್ನು ತೋರಿಸಲಿವೆ. ಪಕ್ಷಿಗಳು ಗೂಡಿಗೆ ತೆರಳಲು ಸಿದ್ಧವಾದರೆ, ಚಿಲಿಪಿಲಿ ಗುಟ್ಟುವುದನ್ನೂ ನಿಲ್ಲಿಸಲಿವೆ. ಇನ್ನು ಕೆಲವು ಪ್ರಾಣಿಗಳು ಕತ್ತಲೆ ವೇಳೆ ಬೇಟೆಗೆ ಸಿದ್ಧವಾಗುತ್ತವೆ. ಸಾಕು ಪ್ರಾಣಿಗಳೂ ಮಗುಮ್ಮಾಗಿ ಕೂರುತ್ತವೆ. ಅಮೆರಿಕದ ವಿವಿಧೆಡೆ ಗ್ರಹಣ ಸಂದರ್ಭ ಬೆಳಗ್ಗಿನ ಜಾವದಷ್ಟು ಉಷ್ಣತೆ ಇದ್ದು, ಪ್ರಾಣಿಗಳ ವರ್ತನೆಯ ಬದಲಾವಣೆಗಳನ್ನು ವೀಕ್ಷಿಸಲು ಪ್ರಾಣಿ ತಜ್ಞರು ಸಿದ್ಧವಾಗಿದ್ದಾರೆ.
Advertisement