ಮಳವಳ್ಳಿ: ಪಟ್ಟಣದ ಪುರಸಭೆ ಅಧ್ಯಕ್ಷೆ ರಾಧಾನಾಗರಾಜು ಅವರು ಬುಧವಾರ2021-2022ನೇ ಸಾಲಿನ 64.8 ಲಕ್ಷ ರೂ.ಉಳಿತಾಯ ಬಜೆಟ್ ಮಂಡಿಸಿದರು.ಪಟ್ಟಣದ ವಿವಿಧ ಆದಾಯ ಮೂಲಗಳಿಂದ 19.04 ಕೋಟಿ ರೂ. ಆದಾಯನಿರೀಕ್ಷಿಸಲಾಗಿದೆ.
18.40 ಕೋಟಿ ರೂ. ವೆಚ್ಚಮಾಡಲಾಗುತ್ತದೆ. 64.8 ಲಕ್ಷ ರೂ.ಉಳಿತಾಯದ ಬಜೆಟ್ ಮಂಡಿಸಲಾಯಿತು.ಬಜೆಟ್ ಮಂಡನೆಗೆ ಅಧ್ಯಕ್ಷೆ ರಾಧಾ ನಾಗರಾಜು ಮುಂದಾಗುತ್ತಿದ್ದಂತೆಯೇ ಸದಸ್ಯರಾದಎಂ.ಎನ್.ಕೃಷ್ಣ, ಶಿವಸ್ವಾಮಿ, ಪುಟ್ಟಸ್ವಾಮಿ,ಬಸವರಾಜು, ರಾಜಶೇಖರ್ ಸೇರಿದಂತೆ ಹಲವುಸದಸ್ಯರು ಪಟ್ಟಣದಲ್ಲಿ ಕುಡಿಯುವ ನೀರಿನಮಹತ್ವದ ಯೋಜನೆಯಾದ 24×7ಕಾಮಗಾರಿಯು ಪೂರ್ಣಗೊಂಡಿದ್ದು,ಈಗಾಗಲೇ ಈ ಯೋಜನೆಯನ್ನು ಪುರಸಭೆಗೆಹಸ್ತಾಂತರಿಸಲಾಗಿದೆ ಎಂದು ಗುತ್ತಿಗೆದಾರಹೇಳುತ್ತಾರೆ.
ಆದರೆ ಅ ಧಿಕಾರಿಗಳು ಹಸ್ತಾಂತರಆಗಿಲ್ಲ ಎನ್ನುತ್ತಾರೆ. ಈ ಬಗ್ಗೆ ಗೊಂದಲವಿದ್ದು,ಅ ಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲಎಂದು ಕಿಡಿಕಾರಿದರು.ಪೂರ್ಣಗೊಂಡ ಎನ್ನುತ್ತಿರುವ ಯೋಜನೆಯಲ್ಲಿ ಬಹುತೇಕ ವಾರ್ಡ್‌ಗಳಿಗೆ ನೀರುಪೂರೈಕೆ ಆಗುತ್ತಿಲ್ಲ.
ಅಲ್ಲದೇ ಯೋಜನೆಗೆಅಳವಡಿಸಿದ್ದ ಪೈಪ್‌ಗ್ಳು ಈಗಾಗಲೇ ತುಕ್ಕುಹಿಡಿದಿದ್ದು, ಬಹುತೇಕ ಕಡೆ ನೀರುಸೋರಿಕೆಯಾಗುತ್ತಿದೆ. ಇಡೀ ಯೋಜನೆಯುಕಳಪೆ ಕಾಮಗಾರಿಯಿಂದ ಕೂಡಿದ್ದು,ಸಂಪೂರ್ಣ ಮಾಹಿತಿ ನೀಡಿ ನಂತರ ಬಜೆಟ್‌ಮಂಡನೆ ಮಾಡಿ ಎಂದು ಆಗ್ರಹಿಸಿದರು.5ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಎಂ.ಟಿ.ಪ್ರಶಾಂತ್ ಪುರಸಭೆಯಲ್ಲಿ ಮಧ್ಯವರ್ತಿಗಳಹಾವಳಿ ಹೆಚ್ಚಾಗಿದ್ದು, ಸದಸ್ಯರ ಮಾತಿಗೆ ಬೆಲೆಇಲ್ಲದಾಗಿದೆ ಎಂದು ಸ್ವಪಕ್ಷದ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಅನ್ನದಾನಿಅ ಧಿಕಾರಿಗಳಿಗೆ ಈ ರೀತಿ ಮುಂದೆ ಆಗದಂತೆತಾಕೀತು ಮಾಡಿದರು.ಸದಸ್ಯ ಶಿವಸ್ವಾಮಿ ಮಾತನಾಡಿ, ಪಟ್ಟಣದಸಾರ್ವಜನಿಕ ಸಶ್ಮಾನವು ಒತ್ತುವರಿಯಾಗಿದ್ದು,ಅದನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕುಎಂದು ಆಗ್ರಹಿಸಿದರು.
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 2 ಲಕ್ಷ ರೂ.ಮೀಸಲು: ಆರಂಭಿಕ ಶುಲ್ಕ 3.16 ಕೋಟಿರೂ. ಸೇರಿದಂತೆ 2021-2022ನೇ ಸಾಲಿನಲ್ಲಿಒಟ್ಟು 15 ಮೂಲಗಳಿಂದ ಆದಾಯನಿರೀಕ್ಷಿಸಲಾಗಿದ್ದು, ಇದರಿಂದಾಗಿ 19 ಕೋಟಿರೂ.ನಲ್ಲಿ 18.40 ಕೋಟಿ ರೂ. ಖರ್ಚುಮಾಡಲು ಉದ್ದೇಶಿಸಲಾಗಿದೆ. 64.8 ಲಕ್ಷ ರೂ.ಉಳಿತಾಯ ಬಜೆಟ್ ಮಂಡಿಸ ಲಾಯಿತು.ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಕ್ಷೇಮಾಭಿವೃದ್ಧಿಗೆ 2 ಲಕ್ಷ ರೂ.ಮೀಸಲಿಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷನಂದಕುಮಾರ್ ಇದ್ದರು.