Advertisement

ಪ್ರಸಕ್ತ ವರ್ಷ ಕುಷ್ಟಗಿ ತಾಲೂಕಿನಲ್ಲಿ 63 ಡೆಂಘೀ ಪ್ರಕರಣ ಪತ್ತೆ

01:09 PM Nov 22, 2019 | Suhan S |

ಕುಷ್ಟಗಿ: ಹಿಂಗಾರು ಮಳೆ ಹಾಗೂ ಬದಲಾದ ಹವಾಮಾನದಿಂದಾಗಿ ತಾಲೂಕಿನಲ್ಲಿ 63 ಡೆಂಘೀ ಪ್ರಕರಣಗಳು ದೃಢಪಟ್ಟಿರುವು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಡೆಂಘೀ ವ್ಯಾಪಿಸದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.

Advertisement

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ವರ್ಷ ಡೆಂಘೀ 2, ಚಿಕೂನಗುನ್ಯಾ 4, ಮಲೇರಿಯಾ ಪ್ರಕರಣ ದಾಖಲಾಗಿದ್ದವು. ಪ್ರಸಕ್ತ ವರ್ಷ ಹಿಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಸುರಿದ ಮಳೆಯಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿದ್ದು, ರೋಗ ಉಲ್ಬಣಿಸಲು ಕಾರಣವಾಗಿದೆ.

ತಾಲೂಕಿನ ಕಳಮಳ್ಳಿ ತಂಡದಲ್ಲಿ ಅತಿಹೆಚ್ಚು ಅಂದರೆ 9 ಪ್ರಕರಣ, ಕೊರಡಕೇರಾದಲ್ಲಿ 6, ವಿರುಪಾಪೂರದಲ್ಲಿ 4, ಯಲಬುಣಚಿ, ಕುಂಬಳಾವತಿ, ಹನುಮಗಿರಿ ತಲಾ 2, ಮಾವಿನ ಇಟಗಿ 3 ಕುಷ್ಟಗಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 63 ಪ್ರಕರಣಗಳಾಗಿದ್ದು, ಯಾವೂದೇ ಸಾವಿನ ಪ್ರಕರಣಗಳಾಗಿಲ್ಲ ಎಂದು ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಡೆಂಘೀ ನಿಯಂತ್ರಣಕ್ಕೆ ಕುಷ್ಟಗಿ ಹಾಗೂ

ತಾವರಗೇರಾ ಪಟ್ಟಣದಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಕೊನೆಯ ಶುಕ್ರವಾರ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರತಿ ತಿಂಗಳ 1ನೇ ದಿನಾಂಕದಿಂದ 4ರವರೆಗೆ ತಪ್ಪದೇ ಆರೋಗ್ಯ ಸಹಾಯಕರು, ಆಶಾ ಕಾರ್ಯಕತೆಯರು, ಲಾರ್ವಾ ಸಮೀಕ್ಷೆ, ಬಹುದಿನಗಳಿಂದ ಸಂಗ್ರಹಿಸಿದ ನೀರನ್ನು ಚೆಲ್ಲುವುದು ಸೇರಿದಂತೆ ಜಾಗೃತಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ 63 ಡೆಂಘೀ ಪ್ರಕರಣಗಳಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಏರುಗತಿಯಾಗಿದ್ದು, ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೋಗ ಪೀಡಿತ ಗ್ರಾಮಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ದೃಢಪಟ್ಟಿರುವ 63 ಪ್ರಕರಣಗಳ ಪೈಕಿ ನಾಲ್ವರು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಉಳಿದವರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.

Advertisement

ಮುನ್ನೆಚ್ಚರಿಕೆ ಕ್ರಮವಾಗಿ ಕಳಮಳ್ಳಿ ತಾಂಡಾದಲ್ಲಿಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಳಿದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಕೊರಡಕೇರಾದಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು, ಆರೋಗ್ಯ ಸಹಾಯಕರು, ಪ್ರತಿ ಮನೆಯ ನೀರಿನ ತೊಟ್ಟಿಯಲ್ಲಿರುವ ಲಾರ್ವಾನಾಶ ಪಡಿಸುವ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಪ್ರಕಾಶ ಗುತ್ತೇದಾರ ವಿವರಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಎನ್‌ಎಸ್‌-1 ಕಿಟ್‌ ಪದ್ಧತಿ ಪರೀಕ್ಷೆಯಲ್ಲಿ ಡೆಂಘೀ ದೃಢೀಕರಿಸಲಾಗದು. ಶಂಕಿತ ಡೆಂಘೀ ಎನ್ನಬಹುದಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮ್ಯಾಕ ಎಲಿಜಾ ಪರೀಕ್ಷೆಯಲ್ಲಿ ಮಾತ್ರ ಡೆಂಘೀ ದೃಢೀಕರಿಸುವುದು ಸಾಧ್ಯ. ಡಾ| ಆನಂದ ಗೋಟೂರು, ತಾಲೂಕಾ ಆರೋಗ್ಯ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next