Advertisement

ಕೋವಿಡ್: ರಾಜ್ಯದಲ್ಲಿಂದು 629 ಪಾಸಿಟಿವ್ ಪ್ರಕರಣ| 782 ಸೋಂಕಿತರು ಗುಣಮುಖ

06:51 PM Sep 28, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 629 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೆ 17 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.28) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 782 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 12634 ಸಕ್ರಿಯ ಪ್ರಕರಣಗಳಿದ್ದು, 0.67 % ಪಾಸಿಟಿವಿಟಿ ದರ ಹಾಗೂ 2.70 % ಡೆತ್ ರೇಟ್ ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ : 

ಬಾಗಲಕೋಟೆ-1, ಬಳ್ಳಾರಿ-2, ಬೆಳಗಾವಿ-12, ಬೆಂಗಳೂರು ಗ್ರಾಮಾಂತರ-16, ಬೆಂಗಳೂರು ನಗರ-229, ಬೀದರ್-0, ಚಾಮರಾಜನಗರ-5, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-17, ಚಿತ್ರದುರ್ಗ-5, ದಕ್ಷಿಣ ಕನ್ನಡ-96, ದಾವಣಗೆರೆ-1, ಧಾರವಾಡ-7, ಗದಗ-0, ಹಾಸನ-27, ಹಾವೇರಿ-2, ಕಲಬುರಗಿ-0, ಕೊಡಗು-30, ಕೋಲಾರ-5, ಕೊಪ್ಪಳ-0, ಮಂಡ್ಯ-22, ಮೈಸೂರು-58, ರಾಯಚೂರು-0, ರಾಮನಗರ-2, ಶಿವಮೊಗ್ಗ-14, ತುಮಕೂರು-22, ಉಡುಪಿ-39, ಉತ್ತರ ಕನ್ನಡ-16, ವಿಜಯಪುರ-0, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next