Advertisement

ರಾಜ್ಯದಲ್ಲಿಂದು 628 ಕೋವಿಡ್‌ ಪಾಸಿಟಿವ್‌ ಪತ್ತೆ: 18 ಸಾವು

08:39 PM Feb 25, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 628 ಮಂದಿ ಕೊರೊನಾ ಸೋಂಕು ದೃಢವಾಗಿದ್ದು, ಅನಾರೋಗ್ಯದಿಂದ ಬಲುತ್ತಿದ್ದ 15ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. 1349 ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

ಕೋವಿಡ್‌ ಸೋಂಕಿತರ ದರ ಶೇ.0.92 ಹಾಗೂ ಮರಣ ಪ್ರಮಾಣ ಶೇ.2.38ಕ್ಕೆ ಇಳಿಕೆಯಾಗಿದೆ. ರಾಜ್ಯಾದ್ಯಂತ ಪ್ರಸ್ತುತ 7518 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ 12, ತುಮಕೂರು, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರ 346, ಬೆಳಗಾವಿ 30, ಚಿತ್ರದುರ್ಗ 22, ಮೈಸೂರು ಹಾಗೂ ಕೊಡಗು 21, ಉಡುಪಿ 17, ದ.ಕ. ಹಾಗೂ ಬಳ್ಳಾರಿ 14, ಉತ್ತರ ಕನ್ನಡ ಹಾಗೂ ಚಾಮರಾಜ ನಗರ 11, ಹಾಸನ 10, ವಿಜಯಪುರ ಧಾರವಾಡ 9, ದಾವಣಗೆರೆ 7, ಕೋಲಾರ ಹಾಗೂ ಚಿಕ್ಕಮಗಳೂರು 6, ಕೊಪ್ಪಳ 5, ಬೆಂಗಳೂರು ಗ್ರಾಮಾಂತರ, ಹಾವೇರಿ ಹಾಗೂ ಕಲಬುರಗಿ ತಲಾ 4, ಚಿಕ್ಕಬಳ್ಳಾಪುರ ತಲಾ 3, ಬೀದರ್‌, ಬಾಗಲಕೋಟೆ 1, ಯಾದಗಿರಿ ಹಾಗೂ ಗದಗ ಶೂನ್ಯ ಪ್ರಕರಣದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next