Advertisement

ಮತ್ತೆ 62 ಮಂದಿಗೆ ಸೋಂಕು

09:49 AM Jul 26, 2020 | Suhan S |

ಬೀದರ: ಗಡಿ ನಾಡು ಬೀದರನಲ್ಲಿ ಕೋವಿಡ್‌-19 ಸೋಂಕಿನ ಆರ್ಭಟ ಮುಂದುವರಿದಿದ್ದು, ಶನಿವಾರ 62 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 1777ಕ್ಕೆ ಏರಿಕೆ ಕಂಡಿದೆ.

Advertisement

ಬೀದರ ತಾಲೂಕು 22, ಬಸವಕಲ್ಯಾಣ 11, ಭಾಲ್ಕಿ 7, ಔರಾದ-ಕಮಲನಗರದಲ್ಲಿ 8 ಮತ್ತು ಹುಮನಾಬಾದ್‌-ಚಿಟಗುಪ್ಪಾ 14 ಸೇರಿ ಒಟ್ಟು 62 ಪಾಸಿಟಿವ್‌ ಬೆಳಕಿಗೆ ಬಂದಿವೆ. ಇಂ‌ದಿನ 62 ಪಾಸಿಟಿವ್‌ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1777ಕ್ಕೆ ಏರಿದೆ. ಈವರೆಗೆ 69 ಜನರು ಮೃತಪಟ್ಟಿದ್ದಾರೆ. ಶನಿವಾರ 25 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1204ಕ್ಕೇರಿದೆ. ಸದ್ಯಕ್ಕೆ 500 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀದರ ನಗರದ ಕೆಎಚ್‌ಬಿ ಕಾಲೋನಿ, ಗುರುನಾನಕ್‌ ಕಾಲೋನಿ, ಆಯಾಸಪುರ, ಕೃಷಿ ಕಾಲೋನಿ, ಶಿವನಗರ ದಕ್ಷಿಣ, ಹೌಸಿಂಗ್‌ ಬೋರ್ಡ್‌ ಕಾಲೋನಿ, ಶಿವನಗರ ಉತ್ತರ, ತಳವಾಡ, ನೌಬಾದ್‌. ಭಾಲ್ಕಿ ತಾಲೂಕಿನ ಕುಡ್ಲಿ, ಹಿರೇಮಠ ಗಲ್ಲಿ, ಬಾಜೋಳಗಾ, ಮೆಹಕರ್‌, ಔರಾದ್‌ ತಾಲೂಕಿನ ಬಳತ್‌, ತೋರಣಾ ಹಾಗೂ ಕಮಲನಗರ ತಾಲೂಕಿನ ಠಾಣಾ ಕುಶನೂರು, ಡೋಣಗಾಂವ್‌, ಕಮಲನಗರ ಪಟ್ಟಣದಲ್ಲಿ ಪಾಸಿಟಿವ್‌ ಬಂದಿದೆ.

ಹುಮನಾಬಾದ್‌ ಪಟ್ಟಣ, ತಾಲೂಕಿನ ಹುಡಗಿ, ತಾಲೂಕು ಆಸ್ಪತ್ರೆಯ ಕ್ವಾಟರ್, ಹಳ್ಳಿಖೇಡ, ಶಿವಪುರ ಗಲ್ಲಿ, ಧುಮ್ಮನಸೂರು ಗ್ರಾಪಂ ಸಮೀಪ, ಕನಕಟ್ಟಾ. ಬಸವಕಲ್ಯಾಣ ತಾಲೂಕಿನ ಬೇಲೂರ, ಮಲ್ಲಿಕಾರ್ಜುನ ವಾಡಿ, ಬೆಟಬಾಲಕುಂದಾ, ಮಂಠಾಳ, ಗೊರಟಾ, ಘೋಟಾಳ, ಜೈ ಶಂಕರ ಕಾಲೋನಿ, ಬಸವಕಲ್ಯಾಣ ನಗರ, ಖಂಡಾಳ ಗ್ರಾಮದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next