Advertisement

62 ಸೋಂಕು ಮುಕ್ತರು ಬಿಡುಗಡೆ

09:53 AM Jul 12, 2020 | Suhan S |

ಹೊಸಕೋಟೆ: ನಗರದ ದಂಡುಪಾಳ್ಯದ ಎಂವಿಜೆ ಆಸ್ಪತ್ರೆಯ ಕೋವಿಡ್‌-19 ಚಿಕಿತ್ಸಾ ಕೇಂದ್ರದಿಂದ ಶನಿವಾರ 62 ಕೋವಿಡ್ ಸೋಂಕುಮುಕ್ತರನ್ನು ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಧರಣಿ ಮೋಹನ್‌ ತಿಳಿಸಿದ್ದಾರೆ.

Advertisement

ಆಸ್ಪತ್ರೆ 200 ಹಾಸಿಗೆಗಳ ಸಾಮರ್ಥ್ಯದ ವಿಶೇಷ ಕೋವಿಡ್‌-19 ಚಿಕಿತ್ಸಾ ಕೇಂದ್ರ ಹೊಂದಿದ್ದು ಇದುವರೆಗೂ 180 ಸೋಂಕು ದೃಢಪಟ್ಟಿದ್ದ ವರನ್ನು ದಾಖಲಿಸಿ ಕೊಳ್ಳಲಾಗಿತ್ತು. ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖ ರಾಗಿರುವ 62 ಜನ ಬಿಡುಗಡೆ ಯಾಗುತ್ತಿದ್ದಾರೆ. ಈ ಕೇಂದ್ರ ಸುಸಜ್ಜಿತವಾದ ಸರ್ಕಾರ ನಿಗದಿಪಡಿಸಿರುವ ನಿಬಂಧನೆಗಳ ಅನ್ವಯ ಅಗತ್ಯ ಉಪಕರಣ ಹೊಂದಿದ್ದು ತಜ್ಞ ವೈದ್ಯರು, ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿ ದ್ದಾರೆ. ದಾಖಲಾದವರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸುತ್ತಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಜ್ಞ ವೈದ್ಯರ ಸಮ್ಮುಖದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಹಾಗೆಯೇ ಆಸ್ಪತ್ರೆಯಿಂದ ಬಿಡುಗಡೆಯಾದವರು ಮುಂದಿನ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದ್ದು ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ವೈದ್ಯರಲ್ಲಿ ತಪಾಸಣೆಗೆ ಒಳಗಾಗುವಂತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next