Advertisement
ದಿಲ್ಲಿ ಒಂದರಲ್ಲೇ 250 ಕಾರುಗಳು ಗ್ರಾಹಕರಿಗೆ ಹಸ್ತಾಂತರವಾಗಿದ್ದು , 200ಕ್ಕೂ ಹೆಚ್ಚು ಕಾರುಗಳು ಮಹಾರಾಷ್ಟ್ರ ಮತ್ತು ಗುಜರಾತ್ಗಳಲ್ಲಿ ಹಸ್ತಾಂತರವಾಗಿವೆ.2019ರ ಮೂರನೇ ತ್ತೈಮಾಸಿಕದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾ ಹೇಳಿಕೊಂಡಿದೆ.
ಕಳೆದ ಕೆಲವು ತಿಂಗಳಲ್ಲಿ ಮಾರುಕಟ್ಟೆ ಪರಿಸ್ಥಿತಿ ಚಿಂತಾಜನಕವಾಗಿದ್ದರೂ, ಬೆಂಜ್ ಪಾಲಿಗೆ ಕಾರು ಮಾರಾಟ ಆಶಾದಾಯವಾಗಿದೆ. ಬ್ರ್ಯಾಂಡ್ ಇಮೇಜ್ ಮತ್ತು ಗ್ರಾಹಕರ ನಂಬಿಕೆ ಇದನ್ನು ಶ್ರುತಪಡಿಸಿದೆ ಎಂದು ಕಂಪೆನಿ ಹೇಳಿಕೊಂಡಿದೆ.