Advertisement

60 ವರ್ಷಗಳು V/s 40 ಸೆಕೆಂಡುಗಳು!

09:55 AM Oct 25, 2019 | mahesh |

ವಿಲಿಯಂ ಶಾಂಕ್ಸ್‌ 18ನೇ ಶತಮಾನದಲ್ಲಿ ಜೀವಿಸಿದ್ದ ಬ್ರಿಟಿಷ್‌ ಗಣಿತಜ್ಞ. ಆತ ಶಾಲೆಯಲ್ಲಿ ಶಿಕ್ಷಕನೂ ಆಗಿದ್ದ. ತನ್ನ ಜೀವಮಾನದ ಮುಕ್ಕಾಲು ಭಾಗವನ್ನು “ಪೈ’ನ ಮೊತ್ತವನ್ನು ಕಂಡುಹಿಡಿಯುವುದರಲ್ಲಿ ಕಳೆದುಬಿಟ್ಟಿದ್ದ. ಗಣಿತದಲ್ಲಿ “ಪೈ’ ಎಂದರೆ ಸರ್ಕಲ್‌ನ ಸುತ್ತಳತೆ ಮತ್ತು ವ್ಯಾಸದ ನಡುವಿನ ಅನುಪಾತ. ಗಣಿತ ಮಾತ್ರವಲ್ಲದೆ ವಿಜ್ಞಾನದಲ್ಲೂ ಪೈ ಮಹತ್ವವನ್ನು ಪಡೆದುಕೊಂಡಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪೈನ ಮೊತ್ತವನ್ನು 6.14 ಎಂದಷ್ಟೇ ನೆನಪಿಟ್ಟುಕೊಂಡಿರುತ್ತಾರೆ. ಅದರೆ ಅದರ ಮೊತ್ತ 14ಕ್ಕೇ ನಿಲ್ಲುವುದಿಲ್ಲ. ಇನ್ನೂ ಮುಂದಕ್ಕೆ ಸಾಗುತ್ತದೆ. ಮುಂದೆ ಸಾಗಿದಷ್ಟೂ ಅದರ ನಿಖರತೆ ಹೆಚ್ಚುತ್ತಾ ಹೋಗುತ್ತದೆ. ವೈಜ್ಞಾನಿಕ ಲೆಕ್ಕಾಚಾರ ಮಾಡಲು ನಿಖರತೆ ತುಂಬಾ ಸಹಕಾರಿ. ವಿಲಿಯಮ್‌ ಶಾಂಕ್ಸ್‌ 707 ಸ್ಥಾನಗಳವರೆಗೆ ಹೋಗಿದ್ದ. ಅಂದರೆ ಆತ ಪತ್ತೆ ಹಚ್ಚಿದ್ದ ಪೈನ ಮೊತ್ತದಲ್ಲಿ 707 ಸಂಖ್ಯೆಗಳಿದ್ದವು. ಅದಕ್ಕೆ ಆತ ತೆಗೆದುಕೊಂಡಿದ್ದು 50 ವರ್ಷಗಳು! ಆಗ ಕ್ಯಾಲ್ಕುಲೇಟರ್‌ನ ಆವಿಷ್ಕಾರ ಆಗಿರಲಿಲ್ಲ ಎನ್ನುವುದು ನೆನಪಿರಲಿ! ವಿಲಿಯಂ ತೀರಿಕೊಂಡು ದಶಕಗಳಾದ ನಂತರ ಫ‌ರ್ಗ್ಯುಸನ್‌ ಎಂಬ ಗಣಿತಜ್ಞ ಕ್ಯಾಲ್ಕುಲೇಟರ್‌ನ ಸಹಾಯದಿಂದ ಪೈನ ಮೊತ್ತವನ್ನು ಲೆಕ್ಕ ಹಾಕಿದ. ಆಗ ವಿಲಿಯಂ ಪತ್ತೆ ಮಾಡಿದ್ದ 707 ಸಂಖ್ಯೆಗಳಲ್ಲಿ 180 ಅಂಕೆಗಳು ತಪ್ಪು ಎಂದು ಪತ್ತೆಯಾಗಿತ್ತು.

Advertisement

1940ರಲ್ಲಿ ಎನಿಯಾಕ್‌(ENIAC) ಕಂಪ್ಯೂಟರ್‌ ನಿಖರವಾಗಿ 2037 ಸಂಖ್ಯೆಗಳನ್ನು 70 ಗಂಟೆಗಳಲ್ಲಿ ಲೆಕ್ಕ ಹಾಕಿತು! ಇನ್ನೂ ಮುಂದೆ 1958ರಲ್ಲಿ ಐಬಿಎಂ ಕಂಪ್ಯೂಟರ್‌ ಅದೇ ಲೆಕ್ಕಾಚಾರವನ್ನು 40 ಸೆಕೆಂಡುಗಳಲ್ಲಿ ಮಾಡಿತು. ವಿಲಿಯಂ ಶಾಂಕ್ಸ್‌ ಯಾವುದರ ಲೆಕ್ಕಾಚಾರದಲ್ಲಿ ತನ್ನ ಜೀವಮಾನದ ಮುಕ್ಕಾಲು ಪಾಲನ್ನೇ ಕಳೆದನೋ, ಅದೇ ಲೆಕ್ಕವನ್ನು ಐಬಿಎಂ 40 ಸೆಕೆಂಡುಗಳಲ್ಲಿ ಮಾಡಿ ಮುಗಿಸಿತ್ತು!

Advertisement

Udayavani is now on Telegram. Click here to join our channel and stay updated with the latest news.

Next