Advertisement

60 ಸಾವಿರ ಗಡಿ ದಾಟಿದ ಅಡಕೆ

10:03 AM Apr 10, 2017 | |

ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಅಡಕೆ ಧಾರಣೆ ಭಾನುವಾರದ ಮಾರುಕಟ್ಟೆಯಲ್ಲಿ ಗರಿಷ್ಠ 60ಸಾವಿರ ರೂ.ಗಡಿ ದಾಟಿದ್ದು, ಶೃಂಗೇರಿ ಮ್ಯಾಮ್‌ಕೋಸ್‌ನಲ್ಲಿ ಸರಕು ಮಾದರಿ ಅಡಕೆ ಕ್ವಿಂಟಾಲ್‌ಗೆ ಗರಿಷ್ಠ 65 ಸಾವಿರ ರೂ.ದಾಖಲಾಗಿದೆ.

Advertisement

ಮಾರ್ಚ್‌ನಿಂದಾಚೆ ಸರಕು, ಬೆಟ್ಟೆ ಹಾಗೂ ರಾಶಿ ಇಡಿ, ಈ ಮೂರು ಮಾದರಿಯ ಅಡಕೆ ಕ್ವಿಂಟಾಲ್‌ಗೆ ಗರಿಷ್ಠ 50 ಸಾವಿರ ರೂ.ದಾಟಿರುವುದು ದಾಖಲೆಯಾಗಿದೆ. ಭಾನುವಾರ ಶೃಂಗೇರಿಯ ಮ್ಯಾಮ್‌ಕೋಸ್‌ನಲ್ಲಿ ಸರಕು ಮಾದರಿ ಅಡಕೆಗೆ ಕ್ವಿಂಟಾಲ್‌ಗೆ ಕನಿಷ್ಠ 51,619ರೂ.ನಿಂದ ಗರಿಷ್ಠ 65,026 ರೂ. ಬೆಲೆ ದೊರಕಿದೆ. ಹಾಗೆಯೇ ಬೆಟ್ಟೆ ಕನಿಷ್ಠ 51,099 ರೂ.ನಿಂದ ಗರಿಷ್ಠ 52,119, ರಾಶಿ ಇಡಿ ಕನಿಷ್ಠ 45,689 ರೂ.ನಿಂದ ಗರಿಷ್ಠ 55108 ಹಾಗೂ ಗೊರಬಲು ಕನಿಷ್ಠ 20108 ರೂ.ನಿಂದ ಗರಿಷ್ಠ 30,118 ರೂ. ದಾಖಲಾಗಿದೆ. 2014ರಲ್ಲಿ ಕೆಂಪಡಕೆ ಕ್ವಿಂಟಾಲ್‌ಗೆ 90 ಸಾವಿರ ರೂ. ಗಡಿ ದಾಟಿತ್ತು. ನಂತರ ಇದ್ದಕ್ಕಿದಂತೆ ಬೆಲೆ ಕುಸಿತ ಕಾಣತೊಡಗಿತು. ಈಗ ಸರಕು ಮಾದರಿ ಅಡಕೆ ಪ್ರತಿ ಕ್ವಿಂಟಾಲ್‌ಗೆ 65 ಸಾವಿರ ರೂ.ಗಡಿ ದಾಟಿ ಮುನ್ನುಗ್ಗತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next