Advertisement
ಸಮಯ ನಿಗದಿಯಂತೆ 7ರಿಂದ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆರಂಭಿಸಲಾಗಿತ್ತು. ಮೊದಲ ದಿನ ಆತಂಕದಿಂದಲೇ ಶಾಲೆಗೆಆಗಮಿಸಿದ್ದ ವಿದ್ಯಾರ್ಥಿಗಳಿಗೆ ಈಗ ಆತಂಕ ದೂರವಾಗಿದ್ದು, ನಿರಾಳರಾಗಿದ್ದಾರೆ.
Related Articles
Advertisement
ಮಕ್ಕಳಿಗಿಲ್ಲ ಪರೀಕ್ಷೆ: ಶಾಲೆಯ ಯಾವುದೇ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿಲ್ಲ. ಬದಲಾಗಿ ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷೆ ನಡೆಸಲಾಗುತ್ತಿದ್ದು, ದೇಹದಲ್ಲಿನ ಉಷ್ಣಾಂಶ ಹೆಚ್ಚಿರುವ ವಿದ್ಯಾರ್ಥಿಗಳು ಹಾಗೂ ನೆಗಡಿ, ಕೆಮ್ಮು, ಜ್ವರದಂಥ ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸೂಚಿಸಲಾಗುತ್ತಿದೆ.
ಹಾಸ್ಟೆಲ್ ಹಾಗೂ ವಸತಿ ನಿಲಯಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿಲ್ಲ.
ಶಾಲೆಗಳಿಗೆ 2.07 ಲಕ್ಷ ಮಕ್ಕಳು ಪ್ರವೇಶ :
ಜಿಲ್ಲೆಯಲ್ಲಿ 2525 ಶಾಲೆಗಳಿದ್ದು, ಈ ಪೈಕಿ 1810 ಸರ್ಕಾರಿ ಶಾಲೆಗಳು, 715 ಖಾಸಗಿ ಶಾಲೆಗಳಿವೆ. ಈಗಾಗಲೇ 2.07 ಲಕ್ಷ ಮಕ್ಕಳು ಶಾಲೆಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 159 ಪಿಯು ಕಾಲೇಜುಗಳಿವೆ. ಈಪೈಕಿ 11 ಕಾಲೇಜುಗಳಿಗೆ ವಿದ್ಯಾರ್ಥಿಗ ಳದಾಖಲಾತಿ ನಡೆದಿಲ್ಲ. ಉಳಿದ 148ರಲ್ಲಿ 70ಸರ್ಕಾರಿ, 25 ಅನುದಾನಿತ, 2 ಮೊರಾರ್ಜಿದೇಸಾಯಿ ಹಾಗೂ 51 ಖಾಸಗಿ ಅನುದಾನ ರಹಿ ಕಾಲೇಜುಗಳು. ನವೆಂಬರ್ ಅಂತ್ಯದವರೆಗೆ ಪ್ರಥಮ ಪಿಯುಗೆ 13,236, ದ್ವಿತೀಯ ಪಿಯುಗೆ 12,299 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಜಿಲ್ಲೆಯ ಯಾವುದೇ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕವರ್ಗದವರಿಗೂ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಅಧ್ಯಾಪಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ. –ಕೆ.ಜಿ.ಗುರುಸ್ವಾಮಿ, ಡಿಡಿಪಿಯು, ಮಂಡ್ಯ
ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನಡೆಸಲಾ ಗುತ್ತಿದೆ. ಇದುವರೆಗೂ ಯಾರಿಗೂ ಸೋಂಕು ಕಂಡು ಬಂದಿಲ್ಲ. ಎಲ್ಲರದ್ದು ನೆಗೆಟಿವ್ ವರದಿ ಬಂದಿದೆ. ಅಲ್ಲದೆ, ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಬ್ರಿಟನ್‌ನಿಂದ ಜಿಲ್ಲೆಗೆ 20 ಮಂದಿ ಆಗಮಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಇದರಿಂದ ರೂಪಾಂತರಿ ವೈರಸ್‌ನ ಭೀತಿ ಇಲ್ಲ. –ಡಾ.ಸಂಜಯ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಡ್ಯ