Advertisement
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಬ್ಲಾಕ್ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಣ ಸಂಯೋಜಕ ಮೊದಲಾದ ಹುದ್ದೆಗೆ ಅನರ್ಹರ ಆಯ್ಕೆ ತಪ್ಪಿಸಲು ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. 10 ವರ್ಷ ಸೇವೆ ಪೂರೈಸಿದ ಶಿಕ್ಷಕರು, ಪ್ರೌಢಶಾಲಾ ಮುಖ್ಯಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳನ್ನು ಗುರುತಿಸಿ ಲಿಖೀತ ಆಯ್ಕೆ ಪರೀಕ್ಷೆಯ ಮೂಲಕ ಈ ಮೇಲಿನ ಹುದ್ದೆಗಳಿಗೆ ನೇಮಿಸುವಂತೆಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ತಿದ್ದುಪಡಿ ಅಧಿ ನಿಯಮದಲ್ಲಿ ತಿಳಿಸಿದೆ. ಪ್ರಾಥಮಿಕ ಶಿಕ್ಷಕರ ತತ್ಸಮಾನ ಶ್ರೇಣಿಯಾದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು(ಸಿಆರ್‌ಪಿ), ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು(ಬಿಆರ್‌ಪಿ), ಶಿಕ್ಷಣ ಸಂಯೋಜಕರು ಹಾಗೂ ಪ್ರೌಢಶಾಲಾ ಶಿಕ್ಷಕರ ತತ್ಸಮಾನ ಶ್ರೇಣಿಯಾದ ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು(ಬಿಆರ್‌ಪಿ), ಶಿಕ್ಷಣ ಸಂಯೋ ಜಕರು, ಮುಖ್ಯೋಪಾಧ್ಯಾಯರ
ಶ್ರೇಣಿಯ (ಬಿ-ಗ್ರೂಪ್) ಬ್ಲಾಕ್ ಸಂಪನ್ಮೂಲ ಸಮನ್ವಯಾ ಧಿಕಾರಿ(ಬಿಆರ್‌ಸಿ), ವಿಷಯ ಪರಿವೀಕ್ಷಕರು, ಎಸ್‌ಎಸ್‌ಎ ಹಾಗೂ ರುಸಾದ ಸಹಾಯಕ ಸಮನ್ವಯಾಧಿಕಾರಿಗಳ ನೇಮಕ ಪರೀಕ್ಷೆ ಮೂಲಕ ನಡೆಸಲು ಅಧಿಸೂಚನೆ ಹೊರಡಿಸಿದೆ. ಪರೀಕ್ಷೆಯನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಎಸ್ಸೆಸ್ಸೆಲ್ಸಿ ಬೋರ್ಡ್) ಮೂಲಕ ನಡೆಸಲಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸ
ಬೇಕು, ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ದಿನಾಂಕ ದೊಳಗೆ ಎಲ್ಲಾ ದಾಖಲೆಗಳನ್ನು ಒದಗಿಸಬೇಕು. ವಿವರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.