Advertisement
ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ “ದೇಗುಲದ ಮೊದಲ ಹಂತಸ್ತಿನ ನಿರ್ಮಾಣ ಕಾರ್ಯವು ಅಕ್ಟೋಬರ್‌ಗೆ ಪೂರ್ಣಗೊಳ್ಳಲಿದೆ. ದೇಗುಲದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ವಿಗ್ರಹವನ್ನು 2024ರ ಮಕರ ಸಂಕ್ರಾಂತಿ ಹಬ್ಬದಂದು ಪ್ರತಿಷ್ಠಾಪಿಸಲಾಗುವುದು,’ ಎಂದು ವಿವರಿಸಿದರು.
ಗರ್ಭಗುಡಿ: 12 ಅಡಿ ಎತ್ತರದ ಪಾಯದ ಮೇಲೆ ಭವ್ಯವಾದ ಗರ್ಭಗುಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎರಡು ವಿಗ್ರಹಗಳು:
ಪ್ರಭು ಶ್ರೀರಾಮನ ಎರಡು ವಿಗ್ರಹಗಳು ಇರಲಿದೆ. ದಶಕಗಳಿಂದ ಸ್ಥಾಪನೆಗೆ ಕಾಯುತ್ತಿರುವ ಮೂಲ ಶ್ರೀ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮತ್ತೊಂದು ಬೃಹತ್ ಶ್ರೀರಾಮನ ಪ್ರತಿಮೆಯನ್ನು ದೇಗುಲದ ಆವರಣದಲ್ಲಿ ಸ್ಥಾಪನೆಯಾಗಲಿದೆ. ಬಹುದೂರದಿಂದ ಈ ಪ್ರತಿಮೆ ಕಾಣಲಿದೆ.
Related Articles
ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ದೇವಾಲಯದ ಕೆಳ ಹಂತಸ್ತಿನ ಸ್ತಂಭಗಳಲ್ಲಿ 3ಡಿ ಯಲ್ಲಿ ಕೆತ್ತಲಾಗುತ್ತದೆ. ಇವು ಉಜ್ಜಯಿನಿಯ ಮಹಾಕಾಲ ದೇಗುಲದ ಲೋಕ ಕಾರಿಡಾರ್ ಮಾದರಿಯಲ್ಲಿ ಇರಲಿದೆ.
Advertisement
ಮೂರ್ತಿಗಳ ಸ್ಥಾಪನೆ:ದೇಗುಲದ ಆವರಣದಲ್ಲಿ ಸೀತಾ ಮಾತೆ, ಲಕ್ಷ್ಮಣ ಪ್ರಭು, ಭರತ, ಶತ್ರುಘ್ನ, ಸುಗ್ರೀವ, ಶಬರಿ, ಪ್ರಭು ಹನುಮಂತ ಸೇರಿದಂತೆ ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖರ ಮೂರ್ತಿಗಳು ಸ್ಥಾಪನೆಯಾಗಲಿವೆ.