Advertisement

India ಕಳೆದ 30 ವರ್ಷಗಳಲ್ಲಿ ಶೇ.60 ಪಕ್ಷಿ ಪ್ರಭೇದ‌ ನಾಶ

12:04 AM Aug 26, 2023 | Team Udayavani |

ಹೊಸದಿಲ್ಲಿ: ನಗರೀಕರಣದತ್ತ ಮನುಷ್ಯ ವಾಲಿದಂತೆಲ್ಲ ಪಕ್ಷಿಸಂಕುಲಕ್ಕೆ ಸಂಕಷ್ಟ ಎದುರಾಗುತ್ತಿದ್ದು, ಭಾರತದಲ್ಲಿ ಕಳೆದ 30 ವರ್ಷಗಳಲ್ಲಿ ಶೇ.60ರಷ್ಟು ಪಕ್ಷಿ ಪ್ರಭೇದಗಳು ನಶಿಸಿಹೋಗಿವೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗಗೊಂಡಿದೆ.

Advertisement

“ಸ್ಟೇಟ್‌ ಆಫ್ ಇಂಡಿಯಾಸ್‌ ಬರ್ಡ್ಸ್‌’ ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯು ದೇಶಾದ್ಯಂತ 30 ಸಾವಿರಕ್ಕೂ ಅಧಿಕ ಪಕ್ಷಿವೀಕ್ಷಕರಿಂದ ದತ್ತಾಂಶಗಳನ್ನು ಸಂಗ್ರಹಿಸಿದೆ. ಆ ಪ್ರಕಾರ ಕಳೆದ 7 ವರ್ಷಗಳಲ್ಲೇ 359 ಪ್ರಭೇದಗಳ ಪೈಕಿ 142 ಪ್ರಭೇದದ ಹಕ್ಕಿಗಳು ನಶಿಸಿಹೋಗಿವೆ ಎನ್ನಲಾಗಿದೆ.

ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌), ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಡಬ್ಲ್ಯುಐಐ) ಸೇರಿದಂತೆ 13 ಸರಕಾರಿ ಹಾಗೂ ಸರಾಕರೇತರ ಸಂಸ್ಥೆಗಳಿಂದ ಈ ವರದಿ ಪ್ರಕಟಗೊಂಡಿದ್ದು, ಪಕ್ಷಿ ಸಂಕುಲದ ಅಳಿವು -ಉಳಿವು ಈಗ ಮನುಷ್ಯರ ಕೈಯಲ್ಲಿದೆ ಎಂದು ಅಧಿಕಾರಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next