Advertisement
ಈ ಬಾರಿ ಹುಂಡಿಯಲ್ಲಿ ಒಟ್ಟು 60,56,478 ರೂ. ದಾಖಲೆ ಮೊತ್ತ ಸಂಗ್ರಹವಾಗಿದೆ. ಇದರೊಂದಿಗೆ 77,500 ರೂ ಮೌಲ್ಯದ 2 ಕೆ.ಜಿ. 350 ಗ್ರಾಂ ಬೆಳ್ಳಿ, 4200 ರೂ ಮೌಲ್ಯದ 2 ಗ್ರಾಂ 500 ಮಿಲಿ ಚಿನ್ನವನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಮಂಗಳವಾರ ನಡೆದ ಎಣಿಕೆ ಕಾರ್ಯದಲ್ಲಿ ಕಳೆದ ಹಲವು ತಿಂಗಳಿಂದ ಕಂಡುಬರುತ್ತಿದ್ದ ನಿಷೇಧಿತ ನೋಟು ಹಾಗೂ ವಿದೇಶಿ ನೋಟು ಪತ್ತೆಯಾಗಿಲ್ಲ..
Related Articles
Advertisement
ಆರೋಪಿಗಳು ನೆಲಮಂಗಲ ಮಾರುತಿ ನಗರದ ನಿವಾಸಿಗಳಾದ ಅಶೋಕ್ ಸಿ. ಮತ್ತು ವಿನೋದ್ ಅಣ್ಣ- ತಮ್ಮಂದಿರಾಗಿದ್ದು, ಸರಗಳ್ಳತನದ ಕಾರ್ಯಕ್ಕೆ ಇಳಿದಿದ್ದರು. ಈ ಕುರಿತು ನಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು, ರಾಮನಗರ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣಸರಹದ್ದುಗಳಲ್ಲಿ ಒಂಟಿಯಾಗಿ ಓಡಾಡುವ, ದನ ಮೇಯಿಸುವ, ಹೊಲದಲ್ಲಿ ಕೆಲಸಮಾಡುವ ಮಹಿಳೆಯರು ವೃದ್ಧೆಯರ ಕತ್ತಿನಲ್ಲಿರುವ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗುತ್ತಿದ್ದರು. ಒಟ್ಟು 26 ಪ್ರಕರಣಗಳನ್ನು ಪತ್ತೆ ಹಚ್ಚಿ 25 ಲಕ್ಷ ರೂ.ಮೌಲ್ಯದ 510 ಗ್ರಾಮ ತೂಕದ 23 ಚಿನ್ನದ ಸರ ಹಾಗೂ ಅರೋಪಿಗಳು ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಟಿ.ರಂಗಪ್ಪ ನೇತೃತ್ವದಲ್ಲಿ ನವೀನ್ ಕುಮಾರ್, ಗಜೇಂದ್ರ, ಬೇಬಿ ವಾಲೇಕರ್, ಶಂಕರಪ್ಪ, ಸೋಮಶೇಖರ್, ಮಂಜುನಾಥ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಲಾಕಾಡೌನ್ ವೇಳೆ ಮದ್ಯ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಅಧೀಕ್ಷಕ ರವಿ ಡಿ ಚನ್ನಣ್ಣನವರ್ ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು. ದೊಡ್ಡಬಳ್ಳಾಪುರ ಪೊಲೀಸ್ ತಂಡ ನಾಗರಾಜ್, ಅಂಜಿ, ನವೀನ್ ಕುಮಾರ್, ಶಶಿಕುಮಾರ್ ಎಂಬುವರನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 13 ಬಾಕ್ಸ್ ಮದ್ಯದ ಬಾಟಲಿ ವಶಕ್ಕೆ ಪಡೆಯಲಾಗಿದೆ.