Advertisement

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

11:39 PM Apr 30, 2024 | Team Udayavani |

ಭೋಪಾಲ್‌: ಮಧ್ಯ ಪ್ರದೇಶದ ಭಿಂಡ್‌ ಜಿಲ್ಲೆಗೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ 6 ಬಾರಿಯ ಕಾಂಗ್ರೆಸ್‌ ಶಾಸಕ ರಾಮ್‌ನಿವಾಸ್‌ ರಾವತ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

ಶಿಯೋಪುರ್‌ ಜಿಲ್ಲೆಯಲ್ಲಿ ಮಂಗಳವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಮ.ಪ್ರ. ಸಿಎಂ ಮೋಹನ್‌ ಯಾದವ್‌ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಸೋಮವಾರವಷ್ಟೇ ಇಂದೋರ್‌ನ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದು ಬಿಜೆಪಿ ಸೇರಿದ್ದರು. ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ.

ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾವತ್‌, ಅವರ ಸಂಪುಟದಲ್ಲಿ ಸಚಿವರಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next