Advertisement
ತಿರುವಿನ ಬದಲಿಗೆ ನೇರ ರಸ್ತೆಗೆ 400 ಮೀಟರ್ ಉದ್ದ ಹೊಸದಾಗಿ ಕಾಮಗಾರಿ ಮಾಡಬೇಕಿದೆ. ಅಲ್ಲದೆ, ಈ ಪ್ರದೇಶ ಸಂಪೂರ್ಣವಾಗಿ ತಗ್ಗಿನಲ್ಲಿ (ಗುಂಡಿಯಿಂದ ಕೂಡಿದೆ) ಇರುವುದರಿಂದ ಸದ್ಯ ಇರುವ ರಸ್ತೆಯ ಎತ್ತರಕ್ಕೆ ತರಬೇಕಾದರೆ ಅಂದಾಜು 6 ಸಾವಿರ ಲೋಡು ಮಣ್ಣು ತುಂಬಿಸಬೇಕಿದೆ. ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿದ್ದ ಎರಡು ತಡೆಯಾಜ್ಞೆ ಪ್ರಕರಣದಲ್ಲಿ ಒಂದು ತೆರವಾಗಿದೆ. ಈಗಾಗಲೇ ನಿರ್ಮಾಣ ಕಾಮಗಾರಿ ಶುರುವಾಗಿದೆ. ಪ್ರಾರಂಭದಲ್ಲಿ ಮಳೆ ನೀರು ಹರಿಯುವ ತೋಡಿನ ಸಂಪರ್ಕ ವ್ಯವಸ್ಥಿತವಾಗಿ ಕಲ್ಪಿಸಬೇಕಿದ್ದು, 80 ಮೀಟರ್ ಉದ್ದದ ತೋಡಿನ ಕೆಲಸ ನಡೆಯುತ್ತಿದೆ.
Related Articles
Advertisement
ಆರಂಭದಿಂದಲೂ ಒಂದಲ್ಲ ಒಂದು ಬಗೆಯ ವಿವಾದದಿಂದ ಅಚ್ಚುಕಟ್ಟಾಗಿ ಕಾಮಗಾರಿ ನಡೆಯಲು ಸಾಧ್ಯವಾಗಿರಲಿಲ್ಲ. ಭೂಸ್ವಾಧೀನ, ಪರಿಹಾರ ವಿತರಣೆ ಸಹಿತ ಮೊದಲಾದ ತಾಂತ್ರಿಕ ಕಾರಣಗಳಿಂದ ಇಲ್ಲಿನ ಕಾಮಗಾರಿ ವಿಳಂಬವಾಗುತ್ತಲೇ ಇತ್ತು. ಇನ್ನೂ ಮುಂದೆ ಕಾಮಗಾರಿ ನಿರ್ವಿಘ್ನವಾಗಿ ಸಾಗುವ ಮೂಲಕ ಶೀಘ್ರ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಬೇಕು ಎಂದು ನಾಗರಿಕರು ಆಶಯ ವ್ಯಕ್ತಪಡಿಸುತ್ತಿದ್ದಾರೆ.