Advertisement

Tamil Nadu: ಕಾರು – ಟ್ರಕ್‌ ಮುಖಾಮುಖಿ ಢಿಕ್ಕಿ; ಭೀಕರ ಅಪಘಾತದಲ್ಲಿ 6 ಮಂದಿ ಮೃತ್ಯು

03:24 PM Jan 28, 2024 | Team Udayavani |

ಚೆನ್ನೈ: ಕಾರು – ಟ್ರಕ್‌ ಮುಖಾಮುಖಿ ಢಿಕ್ಕಿ ಸಂಭವಿಸಿ 6 ಮಂದಿ ಮೃತಪಟ್ಟಿರುವ ಭೀಕರ ಘಟನೆ ಭಾನುವಾರ(ಜ.28 ರಂದು) ಮುಂಜಾನೆ ದಕ್ಷಿಣ ತಮಿಳುನಾಡಿನ ಸಿಂಗಿಲಿಪಟ್ಟಿ -ಪುನ್ನಯ್ಯಪುರಂ ನಡುವಿನ ರಸ್ತೆಯಲ್ಲಿ‌ ನಡೆದಿದೆ.

Advertisement

ಕಾರ್ತಿಕ್, ವೇಲ್ ಮನೋಜ್, ಸುಬ್ರಮಣಿ, ಮನೋಹರನ್ ಮತ್ತು ಪೋತಿರಾಜ್ ಅವರು ಕುಟ್ರಾಲಂಗೆ ವಾರಾಂತ್ಯದ ಪ್ರವಾಸಕ್ಕೆ ತೆರಳಿ ಮನೆಗೆ ಮರಳುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.

ಕಾರಿನ ಚಾಲಕ ವಾಹನ ಚಾಲನೆ ವೇಳೆ ನಿದ್ರಾಮಂಪರಿನಲ್ಲಿದ್ದ ಪರಿಣಾಮ ಮುಂದೆ ಬರುತ್ತಿದ್ದ ಕೇರಳಕ್ಕೆ ಹೋಗುತ್ತಿದ್ದ ಟ್ರಕ್ ಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ವೇಳೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಆಗಮಿಸಿ 30 ನಿಮಿಷದಲ್ಲಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Advertisement

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next