Advertisement

Corona: ಕೊರೊನಾದಿಂದ ಗುಣಮುಖರಾದವರ ಪೈಕಿ ಶೇ.6ರಷ್ಟು ಮಂದಿ ನಿಧನ

09:39 PM Dec 12, 2023 | Pranav MS |

ಚೆನ್ನೈ: ತಮಿಳುನಾಡಿನಲ್ಲಿ 2020-22ರಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದ ರೋಗಿಗಳ ಪೈಕಿ ಶೇ.6ರಷ್ಟು ಮಂದಿ 2023ರ ಜುಲೈ ವೇಳೆಗೆ ಮೃತಪಟ್ಟಿದ್ದಾರೆ. ತಮಿಳುನಾಡು ಆರೋಗ್ಯ ಸಚಿವಾಲಯದ ವರದಿಯಿಂದ ಈ ಮಾಹಿತಿ ಹೊರಬಿದ್ದಿದೆ.

Advertisement

ಮೃತಪಟ್ಟವರ ಪೈಕಿ ಶೇ.20ರಷ್ಟು ಮಂದಿ 61ರಿಂದ 80 ವರ್ಷದ ವಯೋಮಾನದವರಾಗಿದ್ದಾರೆ. ಶೇ.1ರಷ್ಟು ಮಂದಿ 40 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ.
ಮದ್ರಾಸ್‌ ವೈದ್ಯಕೀಯ ಕಾಲೇಜಿನ ಇನ್ಸ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಟಿ ಮೆಡಿಸಿನ್‌ನ ವೈದ್ಯರು ಹಾಗೂ ಸಾರ್ವಜನಿಕ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಮಿಳುನಾಡಿನ(ಚೆನ್ನೈ ಹೊರತುಪಡಿಸಿ) 1,220 ರೋಗಿಗಳ(ಕೊರೊನಾದಿಂದ ಗುಣಮುಖರಾದವರ) ಸರ್ವೆ ಕಾರ್ಯ ನಡೆಸಿದರು. ಈ ರೋಗಿಗಳ ಪೈಕಿ 2023ರ ಜುಲೈ ವೇಳೆಗೆ 73 ಮಂದಿ ರೋಗಿಗಳು ಅಸುನೀಗಿದ್ದಾರೆ ಎಂದು ವರದಿ ತಿಳಿಸಿದೆ.

“ಕೊರೊನಾ ನಂತರದ ಸಮಸ್ಯೆಗಳು, ಸಹಜ ಕಾರಣಗಳು ಸೇರಿದಂತೆ ಅನೇಕ ಕಾರಣಗಳಿಂದ ಈ ರೋಗಿಗಳು ಮೃತಪಟ್ಟಿದ್ದಾರೆ. ನಿಧನರಾದವರ ಪೈಕಿ 61 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಶೂನ್ಯವಾಗಿದೆ. ಕೊರೊನಾ ನಂತರದ ಗುಣಲಕ್ಷಣಗಳನ್ನು ತಿಳಿಯಲೆಂದು ಈ ಅಧ್ಯಯನ ಕೈಗೊಳ್ಳಲಾಗಿತ್ತು’ ಎಂದು ತಮಿಳುನಾಡು ಆರೋಗ್ಯ ನಿರ್ದೇಶಕ ಡಾ. ಟಿ.ಎಸ್‌.ಸೆಲ್ವವಿನಾಯಗಂ ತಿಳಿಸಿದ್ದಾರೆ.

-ಶೇ.20ರಷ್ಟು ಮೃತಪಟ್ಟವರು 61ರಿಂದ 80 ವರ್ಷದ ವಯೋಮಾನದವರಾಗಿದ್ದಾರೆ.
-ಶೇ.1ರಷ್ಟು ಮೃತಪಟ್ಟವರು 40 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ.
-1,220 ರೋಗಿಗಳ(ಕೊರೊನಾದಿಂದ ಗುಣಮುಖರಾದವರ) ಸರ್ವೆ ನಡೆಸಲಾಯಿತು.
-73 ರೋಗಿಗಳು ಈ ಪೈಕಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next