Advertisement

ಕನ್ಸಾಸ್‌ ಶೂಟರ್‌ ಪತ್ತೆಗೆ 6 ಲಕ್ಷ ರೂ. ಬಹುಮಾನ

11:32 AM Jul 09, 2018 | Team Udayavani |

ಹೊಸದಿಲ್ಲಿ: ಕನ್ಸಾಸ್‌ ರೆಸ್ಟೋರೆಂಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪುವನ್ನು ಕೊಂದ ಹಂತಕನಿಗಾಗಿ ಬಲೆ ಬೀಸಿರುವ ಅಮೆರಿಕ ಪೊಲೀಸ್‌ ಇಲಾಖೆ, ಅಪರಾಧಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್‌ (ಅಂದಾಜು 6 ಲಕ್ಷ ರೂ.) ಬಹುಮಾನ ಘೋಷಿಸಿದೆ.

Advertisement

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹಂತಕನ ಚಹರೆ ಸ್ಪಷ್ಟವಾಗಿ ಕಾಣುತ್ತಿದ್ದು, ಸಾರ್ವಜನಿಕರಿಂದ ಸುಳಿವು ಪಡೆಯ ಲೆಂದು ಆತನ ಫೋಟೋಗಳನ್ನು ಬಿಡು ಗಡೆ ಮಾಡಲಾಗಿದೆ. ವೀಡಿಯೋದಲ್ಲಿ ಕಪ್ಪು ಬಣ್ಣದ, ತೆಳ್ಳನೆಯ ಹಾಗೂ ಎತ್ತರದ ವ್ಯಕ್ತಿ ಯೊಬ್ಬ ರೆಸ್ಟೋರೆಂಟ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡಿರುವ ದೃಶ್ಯಗಳಿವೆ. ಫ್ರೆಂಚ್‌ ಶೈಲಿಯ ಗಡ್ಡ ಬಿಟ್ಟಿರುವ ಈತ ಕಂದು ಬಣ್ಣದ ಮೇಲೆ ಬಿಳಿ ಪಟ್ಟೆಗಳುಳ್ಳ ಟಿಶರ್ಟ್‌ ಹಾಗೂ ಕಂದು ಬಣ್ಣದ ಪ್ಯಾಂಟ್‌ ಧರಿಸಿದ್ದು, ಬಿಳಿ ಬಣ್ಣದ ಕ್ಯಾನ್ವಾಸ್‌ ಶೂ ಧರಿಸಿದ್ದಾನೆ. ಈತನೇ ಅಪರಾಧಿಯಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧಾರದ ಮೇಲೆ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದು,  ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಿತ್ತರಿಸುವ ಮೂಲಕ ಹಂತಕನ ಪತ್ತೆಗೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಜ್ಜಾಗಿದ್ದಾರೆ. ಇದೇ ವೇಳೆ, ರೆಸ್ಟಾರೆಂಟ್‌ಗೆ ಹಂತಕ ಬಂದು ಗನ್‌ ತೋರಿಸಿದಾಗ, ಎಲ್ಲರೂ ಹೆದರಿ ಅಲ್ಲಲ್ಲಿ ಅಡಗಿ ಕುಳಿತರು. ಭಯಭೀತನಾದ ಶರತ್‌ ಅಲ್ಲಿಂದ ಓಡಿಹೋಗಲು ಯತ್ನಿಸಿದರು. ಅದನ್ನು ನೋಡಿದ ಹಂತಕ, ಶರತ್‌ ಬೆನ್ನಿಗೆ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಸುಷ್ಮಾ ಭರವಸೆ: ಶರತ್‌ ಕೊಪ್ಪು ಸಾವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶೋಕ ವ್ಯಕ್ತಪಡಿಸಿದ್ದಾರೆ. ಶರತ್‌ ಕುಟುಂಬಕ್ಕೆ ಅಗತ್ಯ ನೆರವನ್ನು ನೀಡುವುದಾಗಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next