Advertisement

Mumbai-Nashik Highway; ಜೀಪ್‌- ಟ್ರಕ್ ನಡುವೆ ಅಪಘಾತ: 6 ಮಂದಿ ಮೃತ್ಯು

05:17 PM Jul 18, 2023 | Team Udayavani |

ಥಾಣೆ: ವೇಗವಾಗಿ ಬಂದ ಟ್ರಕ್ ವೊಂದು ಜೀಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

Advertisement

ಮೃತರನ್ನು ಚಿನ್ಮಯ್‌ ಶಿಂಧೆ (15), ರಿಯಾ ಪರದೇಶಿ, ಚೈತಾಲಿ ಪಿಂಪಲ್‌ (27), ಸಂತೋಷ್‌ ಅನಂತ್‌ ಜಾಧವ್‌ (50), ವಸಂತ ಧರ್ಮ ಜಾಧವ್‌ (50) ಮತ್ತು ಪ್ರಜ್ವಲ್‌ ಫಿರ್ಕೆ ಎಂದು ಗುರುತಿಸಲಾಗಿದೆ.

ಇಬ್ಬರು ಮಹಿಳೆಯರು ಸೇರಿದಂತೆ ಜೀಪ್‌ನಲ್ಲಿದ್ದ ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಾಯಾಳುಗಳನ್ನು ಕಲ್ವಾ ಮತ್ತು ಭಿವಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರನ್ನು ಹೊತ್ತ ಜೀಪ್‌ ಪಾಡ್ಘಾ ದಿಂದ ಖಡವಲಿ ರೈಲು ನಿಲ್ದಾಣದ ಕಡೆಗೆ ಸಾಗುತ್ತಿದ್ದಾಗ ಎದುರುಗಡೆಯಿಂದ ಬಂದ ಟ್ರಕ್‌ ಡಿಕ್ಕಿ ಹೊಡೆದಿದೆ. ಜೀಪ್‌ ಸುಮಾರು 100 ಮೀ. ದೂರದಲ್ಲಿ ಪಲ್ಟಿಯಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಿವಂಡಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next