Advertisement
ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ತಿದ್ದುಪಡಿ ಕಾಯ್ದೆ 2017ರ ನಿಯಮ 22(ಬಿ), ಉಪನಿಯಮ (2) ರಂತೆ ತಜ್ಞರ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಕೃಪಾಂಕ ನೀಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮಂಗಳವಾರ ತಿಳಿಸಿದ್ದರು. ಆದರೆ, ಎಷ್ಟು ಕೃಪಾಂಕ ನೀಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿರಲಿಲ್ಲ. ವಿಷಯ ತಜ್ಞರ ಸಮಿತಿಯು ನೀಡಿರುವ ಶಿಫಾರಸಿನಂತೆ ಆಂಗ್ಲ ಭಾಷೆಯ ಒಂದು ಅಂಕದ ಮೂರು ಕಡ್ಡಾಯ ಪ್ರಶ್ನೆಗೆ ತಲಾ ಒಂದೊಂದು ಅಂಕದಂತೆ 3 ಕೃಪಾಂಕ ಹಾಗೂ ಭೌತಶಾಸ್ತ್ರ ವಿಷಯಕ್ಕೆ 5+1 ಕೃಪಾಂಕ ನೀಡಲು ಇಲಾಖೆ ನಿರ್ಧರಿಸಿದೆ ಎಂದು ನಿರ್ದೇಶಕಿ ಸಿ.ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ದ್ವಿತೀಯ ಪಿಯುಸಿ ಭೌತಶಾಸ್ತ್ರಕ್ಕೆ 6, ಇಂಗ್ಲಿಷ್‌ಗೆ 3 ಕೃಪಾಂಕ
06:15 AM Mar 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.