ದೇವನಹಳ್ಳಿ: ಹಾಲು ಉತ್ಪಾದಿಸುವ ರೈತರಿಗೆ ಸರ್ಕಾರದಿಂದ 6 ರೂ.ಪ್ರೋತ್ಸಾಹ ಧನ ನೀಡಲಾಗುವುದು ಎಂದು ಬೆಂಗಳೂರು ಪೂರ್ವ ತಾಲೂಕಿನ ಬಮೂಲ್ ನಿದೇರ್ಶಕ ಮಂಜುನಾಥ್ ತಿಳಿಸಿದರು.
ತಾಲೂಕಿನ ಬಾಲೇಪುರ ಹಾಲು ಉತ್ಪಾದಕರ ಸಹಕಾರಿ ಸಂಘದ 2018-19 ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.ತಿಂಗಳ ಹಿಂದೆ ಪ್ರತಿ ಲೀಟರ್ ಹಾಲಿಗೆ ಒಂದು ರೂ. ಹೆಚ್ಚಿಸಲಾಗಿದೆ. ಗುಣಮಟ್ಟದ ಹಾಲಿಗೆ ಲೀಟರ್‌ಗೆ 28 ರೂ.ಸಿಗಲಿದೆ. ಹಾಲು ಕರೆಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡುತ್ತದ್ದೇವೆ. ಬಮೂಲ್‌ನಿಂದ ಬರುವ ಎಲ್ಲಾ ಯೋಜನೆಗಳು ರೈತರಿಗೆ ತಲುಪಬೇಕು.ಈ ನಿಟ್ಟಿನಲ್ಲಿ ಬಮೂಲ್ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಹಾಲನ್ನು ಸರಬರಾಜು ಮಾಡುವುದರ ಮೂಲಕ ಹೆಚ್ಚಿನ ಲಾಭಗಳಿಸಬಹುದು.
ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಹಾಗೂ ರಾಸುಗಳ ವಿಮೆ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಕನಕಪುರದಲ್ಲಿ ಮೆಗಾ ಡೇರಿಯಾಗಿರುವುದರಿಂದ 16 ಲಕ್ಷ ಲೀಟರ್ ಹಾಲು ಬರುತ್ತಿದೆ. ಇದರಿಂದ 10 ಲಕ್ಷ ಲೀಟರ್ ಮಾತ್ರ ಖಾಲಿಯಾಗುತ್ತಿದೆ ಉಳಿದ 6 ಲಕ್ಷ ಲೀಟರ್ ಆಹಾರ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ. ಹಾಲಿನ ಗುಣಮಟ್ಟದ ತಕ್ಕಂತೆ ರೈತರಿಗೆ ಹಣ ಕೈ ಸೇರುತ್ತಿದೆ ಎಂದರು.
ಸಂಘದ ಅಧ್ಯಕ್ಷ ರಾಮಾಂಜನಪ್ಪ ಮಾತನಾಡಿ ನಮ್ಮ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದಸ್ಯರಿಗೆ ಶೇಕಡ 2 ರೂ 90 ಪೈಸೆ ಬೋನಸ್ ನೀಡಲಾಗುತ್ತಿದೆ. ಸಂಘದಲ್ಲಿ ರೈತರಿಗೆ ಇನ್ನೂ ಹಲವಾರು ಯೋಜನೆಗಳು ಜಾರಿಯಾಗಲಿವೆ. ಬಮೂಲ್ ವಿಮೆ ಯೋಜನೆಯನ್ನು ಪ್ರತಿಯೊಬ್ಬ ಸದಸ್ಯರು ಉಪಯೋಗಿಸುವಂತೆ ಪ್ರೋತ್ಸಾಯಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಪೂರ್ವ ಶಿಬಿರ ಕಛೇರಿಯ ಉಪವ್ಯವಸ್ಥಾಪಕ ಅಶೋಕ್, ವಿಸ್ತರಣಾಧಿಕಾರಿ ಹನುಮಂತಪ್ಪ, ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ, ನಿರ್ದೇಶಕರಾದ ರಾಮ ಕೃಷ್ಣಪ್ಪ, ನಂಜಪ್ಪ, ಕೆಂಪಣ್ಣ, ವೆಂಕಟರಾಮಯ್ಯ, ಕೃಷ್ಣಪ್ಪ, ಮುನಿರಾಜಪ್ಪ, ರಾಮಕೃಷ್ಣಪ್ಪ, ವನಜಾ ಕ್ಷಮ್ಮ, ಮುನಿಯಮ್ಮ, ರಾಜಪ್ಪ, ಗ್ರಾಪಂ ಉಪಾಧ್ಯಕ್ಷ ನವೀನ್, ಗ್ರಾಪಂ ಸದಸ್ಯ ಆಂಜಿನಪ್ಪ, ಗ್ರಾಮದ ಮುಖಂಡ ರಮೇಶ್, ಕಾರ್ಯನಿರ್ವಹಣಾಧಿಕಾರಿ ಕೆಂಪರಾಜ್, ಹಾಲು ಪರೀಕ್ಷಕ ಮುನಿಕಾಂತಪ್ಪ, ಸಹಾಯಕ ಆಂಜಿನಪ್ಪ ಮತ್ತಿತರರು ಇದ್ದರು.