Advertisement

Land Dispute: ಜಮೀನು ವಿವಾದ… ಎರಡು ಗುಂಪುಗಳ ನಡುವೆ ಘರ್ಷಣೆ: 6 ಮಂದಿ ಮೃತ್ಯು

12:16 PM Oct 02, 2023 | Team Udayavani |

ಉತ್ತರ ಪ್ರದೇಶ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಆರು ಜನರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಸಂಭವಿಸಿದೆ.

Advertisement

ರಾಮಶಿಶ್ ಯಾದವ್ ಮತ್ತು ಶಶಿಭೂಷಣ್ ಚೌಹಾಣ್ ಅವರ ಜಮೀನಿನ ಸುತ್ತ ಬೇಲಿ ಹಾಕುವಾಗ ವಿಚಾರದಲ್ಲಿ ವಿವಾದ ಪ್ರಾರಂಭವಾಗಿದ್ದು. ರಾಮಶಿಶ್ ಯಾದವ್ ಅವರ ಜಮೀನಿಗೆ ಹೋಗುವ ರಸ್ತೆಯು ನಿವೃತ್ತ ಬಿಎಸ್ಎಫ್ ಅಧಿಕಾರಿ ಚೌಹಾಣ್ ಅವರ ಮನೆಯ ಮೂಲಕ ಹಾದುಹೋಗುತ್ತದೆ. ಚೌಹಾಣ್ ಹೇಳಿಕೆಯಂತೆ ರಾಮಶಿಶ್ ತನ್ನ ಜಮೀನಿನ ಕೆಲವು ಭಾಗವನ್ನು ಅತಿಕ್ರಮಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ. ಇದೆ ವಿಚಾರವಾಗಿ ರಾಮಶಿಶ್ ಹಾಗೂ ಚೌಹಾಣ್ ಕುಟುಂಬದ ನಡುವೆ ಗಲಾಟೆ ಆರಂಭವಾಗಿದೆ ಕೆಲ ಕಾಲ ನಡೆದ ಗಲಾಟೆ ತಾರಕಕ್ಕೇರಿ ಎರಡೂ ಕುಟುಂಬ ಸದಸ್ಯರು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ, ಅಲ್ಲದೆ ಪಕ್ಕದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಇದರ ಪರಿಣಾಮ ಆರು ಮಂದಿ ಮೃತಪಟ್ಟು ಆರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡು ಪಕ್ಕದ ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆ ನಡೆದ ಕೂದಲು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ವಾಹನಗಳಿಗೆ ಹಚ್ಚಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಬಂಧಿಸಿ ಡಿಯೋರಿಯಾದ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸಂಕಲ್ಪ್ ಶರ್ಮಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮೃತ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರು/ಐಜಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: Ernakulam ಗೂಗಲ್ ಮ್ಯಾಪ್ ಅಚಾತುರ್ಯ; ನದಿಗೆ ಧುಮುಕಿದ ಕಾರು; ಇಬ್ಬರು ವೈದ್ಯರ ಸಾವು

Advertisement

Udayavani is now on Telegram. Click here to join our channel and stay updated with the latest news.

Next