Advertisement

Drug peddlers: 6 ಮಂದಿ ಡ್ರಗ್ಸ್‌ ಪೆಡ್ಲರ್‌ ಬಂಧನ: 44 ಲಕ್ಷ ರೂ. ಮಾದಕ ವಸ್ತು ಜಪ್ತಿ

09:42 AM Mar 13, 2024 | Team Udayavani |

ಬೆಂಗಳೂರು: ಡ್ರಗ್ಸ್‌ ಪೆಡ್ಲರ್‌ಗಳ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಫೆಬ್ರವರಿಯಲ್ಲಿ ಮೂವರು ವಿದೇಶಿ ಡ್ರಗ್ಸ್‌ ದಂಧೆಕೋರರು ಸೇರಿದಂತೆ 6 ಮಂದಿ ಪೆಡ್ಲರ್‌ಗಳನ್ನು ಬಂಧಿಸಿ 44 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

Advertisement

ಕಂಪನಿ ಮ್ಯಾನೇಜರ್‌: ಯಲಹಂಕ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಮಾರ್ಕೆಟಿಂಗ್‌ ಕಂಪನಿಯ ಮ್ಯಾನೇ ಜರ್‌ವೊಬ್ಬನನ್ನು ಬಂಧಿಸಿ 8 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈತ ಹೊರ ರಾಜ್ಯದವನಾಗಿದ್ದು, ಹೊರರಾಜ್ಯದಿಂದ ಗಾಂಜಾ ಖರೀದಿಸಿ, ನಗರದ ಪರಿಚಯಸ್ಥ ಗಿರಾಕಿಗಳಿಗೆ ಮಾರುತ್ತಿದ್ದ. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಗಿಟಾರ್‌ ಕಲಿಯಲು ಬಂದವ ಸೆರೆ: ಕೆ.ಜಿ.ನಗರ ಪೊಲೀಸ್‌ ಠಾಣೆಯ ಪ್ರಕರಣದಲ್ಲಿ ಗಿಟಾರ್‌ ಕಲಿಯುವ ಸಲುವಾಗಿ ಹೊರ ರಾಜ್ಯದಿಂದ ಬಂದಿದ್ದ ವ್ಯಕ್ತಿಯೊಬ್ಬ ಗಾಂಜಾ ಸೇವಿಸುವ ಹವ್ಯಾಸ ಹೊಂದಿದ್ದ. ಆತ ಸುಳ್ಳು ವಿಳಾಸವನ್ನು ನೀಡಿ ವಿದೇಶಿ ಪೊಸ್ಟ್‌ ಮೂಲಕ ಹೊರ ದೇಶದಿಂದ ಹೈಡ್ರೋ ಗಾಂಜಾ ಖರೀದಿ ಸುತ್ತಿದ್ದ. ಇದೀಗ ಆತ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ಸಿಗ್ವಿ ಡೆಲಿವರಿ ಬಾಯ್‌: ಇನ್ನು ರಾಜಗೋಪಾಲನಗರ ಪೊಲೀಸ್‌ ಠಾಣೆಯ ಪ್ರಕರಣದಲ್ಲಿ 3 ವರ್ಷಗಳ ಹಿಂದೆ ನಗರಕ್ಕೆ ಬಂದ ಹೊರ ರಾಜ್ಯದ ವ್ಯಕ್ತಿಯೊಬ್ಬ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದ. ಈತನು ಹೊರ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ. ಈತನಿಂದ 6 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next