WHO : ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದಾದ ಹೊಸ ಕೋವಿಡ್ -19 ಲಸಿಕೆಗಳು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಳಕೆಗೆ ಸಿದ್ಧವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರರಿಂದ ಎಂಟು ಹೊಸ ಕೋವಿಡ್ 19 ರೋಗ ನಿರೋಧಕಗಳು ಕ್ಲಿನಿಕಲ್ ಅಧ್ಯಯನವನ್ನು ಪೂರ್ಣಗೊಳಿಸಲಿವೆ ಮತ್ತು ವರ್ಷದ ಅಂತ್ಯದ ವೇಳೆಗೆ ಪರಿಶೀಲನೆಗೆ ಒಳಗಾಗಬಹುದು ಎಂದು ಜಿನೀವಾ ಮೂಲದ ಏಜೆನ್ಸಿಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಕೇವಲ 122 ದೇಶಗಳು ಮಾತ್ರ ಜನರಿಗೆ ರೋಗನಿರೋಧಕ ಶಕ್ತಿಯನ್ನು ಪೂರೈಸಲು ಆರಂಭಿಸಿವೆ ಎಂದು ಬ್ಲೂಮ್ ಬರ್ಗ್ ಸುದ್ದಿ ಸಂಸ್ಥೆ ಸಂಗ್ರಹಿಸಿದ ಮಾಹಿತಿ ತಿಳಿಸಿದೆ.
ಓದಿ : ಮಾ.16: ಉದಯವಾಣಿ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ನಲ್ಲಿ ರಿಷಬ್ ಶೆಟ್ಟಿ
ನಮ್ಮಲ್ಲಿ ಪೂರೈಸಲಾಗುತ್ತಿರುವ ಕೋವಿಡ್ ಲಸಿಕೆಗಳ ಬಗ್ಗೆ ನಮಗೆ ಹೆಮ್ಮೆಯಾಗಬೇಕು ಆದರೆ” ನಾವು ಇನ್ನಷ್ಟು ಸುಧಾರಿಸಬಹುದು ಎಂದು ನಾನು ಭಾವಿಸುತ್ತೇನೆ, 2022 ರವರೆಗೆ, ನಾವು ಸುಧಾರಿತ ಲಸಿಕೆಗಳ ಪೂರೈಕೆಗೆ ಮುಂದಾಗಲು ಪ್ರಯತ್ನಿಸಬೇಕು” ಎಂದು ಕ್ಷಯರೋಗ ಮತ್ತು ಎಚ್ ಐ ವಿ ಕುರಿತ ಸಂಶೋಧನೆಗೆ ಖ್ಯಾತಿ ಪಡೆದ ಭಾರತೀಯ ಶಿಶುವೈದ್ಯೆ ಸ್ವಾಮಿನಾಥನ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಈಗಾಗಲೇ ಬಳಕೆಯಲ್ಲಿರುವ ಕೋವಿಡ್ 19 ಲಸಿಕೆಗಳನ್ನು ಉತ್ಪಾದಿಸಿದ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಹರಡುತ್ತಿರುವ ಕೋವಿಡ್ ರೂಪಾಂತರಗಳ ವಿರುದ್ಧ ಹೋರಾಡಲು ತಯಾರಿಸಿದ ಆವೃತ್ತಿಗಳ ಪ್ರಾಯೋಗಿಕ ಪರೀಕ್ಷಿಗೆ ಮುಂದಾಗಿವೆ.
ಹೆಚ್ಚಿನ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸಬೇಕಾಗಿದೆ, ನಾವು ಭವಿಷ್ಯಕ್ಕೆ ಸಿದ್ಧರಾಗಿರಬೇಕು ಎಂದು ಸ್ವಾಮಿನಾಥನ್ ಹೇಳಿದ್ದಾರೆ.
ಇನ್ನು, SARS-CoV-2 ಸೋಂಕಿಗೆ ಒಳಗಾದ ಜನರಿಗೆ ಎರಡು ಪ್ರಮಾಣದ ಲಸಿಕೆ ಅಗತ್ಯವಿದೆಯೇ ಎಂದು ವಿಶ್ವ ಆರೋಗ್ಯ ಸಂಸ್ತೆಯು ರೋಗನಿರೋಧಕ ತಜ್ಞರ ಕಾರ್ಯತಂತ್ರದ ಸಲಹಾ ಗುಂಪು ಪರಿಶೀಲಿಸುತ್ತಿದೆ.
ಓದಿ : 40 ಸ್ಥಾನ ಗೆದ್ದರೆ ಕೇರಳದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆಯೇ? ಏನಿದು ಲೆಕ್ಕಾಚಾರ