Advertisement

ಹಿಮಾ ದಾಸ್‌ಗೆ 5ನೇ ಚಿನ್ನ

03:00 AM Jul 22, 2019 | Sriram |

ಹೊಸದಿಲ್ಲಿ: ಭಾರತೀಯ ಸ್ಪ್ರಿಂಟರ್‌ ಹಿಮಾ ದಾಸ್‌ ಜುಲೈ ತಿಂಗಳಲ್ಲಿ ಪ್ರಚಂಡ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. 20 ದಿನಗಳ ಅಂತರದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದನೇ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

Advertisement

ಜೆಕ್‌ ಗಣರಾಜ್ಯದಲ್ಲಿ ನಡೆದ ಆ್ಯತ್ಲೆಟಿಕ್ಸ್‌ನಲ್ಲಿ ತನ್ನ ನೆಚ್ಚಿನ 400 ಮೀ. ಓಟದಲ್ಲಿ ಪಾಲ್ಗೊಂಡ ಹಿಮಾ ದಾಸ್‌ ಈ ಋತುವಿನ ಶ್ರೇಷ್ಠ ಸಮಯದೊಂದಿಗೆ (52.09 ಸೆ.) ಚಿನ್ನ ಗೆದ್ದರು. ಆದರೆ ಸ್ವಲ್ಪದರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ (51.80 ಸೆ.) ಗಳಿಸುವ ಅವಕಾಶ ಕಳೆದುಕೊಂಡರು. ಕಳೆದ ಜಕಾರ್ತಾ ಏಶ್ಯನ್‌ ಗೇಮ್ಸ್‌ನಲ್ಲಿ ಹಿಮಾ ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ  (50.79 ಸೆ.) ನೀಡಿದ್ದರು.

ಯುರೋಪ್‌ನಲ್ಲಿ ಜು. 2ರಂದು ನಡೆದ 200 ಮೀ. ರೇಸ್‌ನಲ್ಲಿ ಪಾಲ್ಗೊಂಡಿರುವುದು ಹಿಮಾ ದಾಸ್‌ ಅವರ ಚೊಚ್ಚಲ ಸ್ಪರ್ಧೆಯಾಗಿತ್ತು. ಆಬಳಿಕ ಜು. 7, 13 ಮತ್ತು 17ರಂದು ನಡೆದ ಸ್ಪರ್ಧೆಯ 200 ಮೀ.ನಲ್ಲೂ ಚಿನ್ನ ಗೆದ್ದು ಸಾಹಸ ಮೆರೆದಿದ್ದರು.

400 ಮೀ.ನಲ್ಲಿ ಮೊದಲ ಬಂಗಾರ
“ದಿಂಗ್‌ ಎಕ್ಸ್‌ಪ್ರೆಸ್‌’ ಖ್ಯಾತಿಯ ಅಸ್ಸಾಂನ 19ರ ಹರೆಯದ ಹಿಮಾ ದಾಸ್‌ 400 ಮೀ.ನಲ್ಲಿ ಇದೇ ಮೊದಲ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅವರು ಕಳೆದ ಎಪ್ರಿಲ್‌ನಲ್ಲಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಏಶ್ಯನ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನ 400 ಮೀ. ಸ್ಪರ್ಧೆಯಲ್ಲಿ ಗುರಿ ತಲುಪಲು ಒದ್ದಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next