Advertisement

5 ನೇ ತರಗತಿವರೆಗೆ ಶಾಲೆ ನಡೆಸಿದರೆ ಬೀಗ

01:35 PM Mar 15, 2021 | Team Udayavani |

ಕೋಲಾರ: ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ, 1ರಿಂದ 5ನೇ ತರಗತಿ ಶಾಲೆ ನಡೆಸಿದರೆಅಂತಹ ಶಾಲೆಗೆ ಬೀಗ ಜಡಿದು ಪ್ರಕರಣ ದಾಖಲಿಸುವುದಲ್ಲದೇ ಮಾನ್ಯತೆ ರದ್ದುಪಡಿಸಲು ಶಿಫಾರಸು ಮಾಡಿ ಎಂದು ಶಿಕ್ಷಣ ಸಂಯೋಜಕರಿಗೆ ಬಿಇಒ ಕೆ.ಎಸ್‌.ನಾಗರಾಜಗೌಡ ಸೂಚನೆ ನೀಡಿದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರ ಸಭೆ ನಡೆಸಿದ ಬಿಇಒ ಅವರು,ಮಾಲೂರಿಗೆ ಬಂದಿದ್ದ ಶಿಕ್ಷಣ ಸಚಿವರೂ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಲಾಖೆಯಆಯುಕ್ತರೂ ಸುತ್ತೋಲೆ ಕಳುಹಿಸಿದ್ದಾರೆ ಎಂದರು.

ಶಾಲೆಗಳಿಗೆ ಭೇಟಿ ನೀಡಿ: 1ರಿಂದ 5ನೇ ತರಗತಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕರೆಸಬೇಡಿಎಂದು ಸೂಚನೆ ನೀಡಿದ್ದರೂ ಕೆಲವು ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ಕರೆಸುತ್ತಿದ್ದಾರೆ ಎಂಬದೂರುಗಳ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಶಾಲೆಗಳಿಗೆ ಭೇಟಿ ನೀಡಿ ಕ್ರಮವಹಿಸಲು ಸಿಸಿಒಗಳಿಗೆಸೂಚನೆ ನೀಡಿದರು.

ಇಲಾಖೆಯ ಗಮನಕ್ಕೆ ತನ್ನಿ: ಮಕ್ಕಳ ಆರೋಗ್ಯ ರಕ್ಷಣೆ ಪೋಷಕರ ಜವಾಬ್ದಾರಿಯಾಗಿದೆ.ಪೋಷಕರು ತಮ್ಮ ಪೂರ್ವ ಪ್ರಾಥಮಿಕತರಗತಿಗಳಿಂದ 5ನೇ ತರಗತಿ ವರೆಗಿನ ಮಕ್ಕಳನ್ನುಶಾಲೆಗೆ ಕಳುಹಿಸಬಾರದು, ಶಾಲೆಯವರುಕಳುಹಿಸಲು ಸೂಚಿಸಿದರೆ ಕೂಡಲೇ ಇಲಾಖೆಯಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

ಓದುವ ಬೆಳಕು ಪ್ರಗತಿ ಪರಿಶೀಲಿಸಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಪಂ ಗ್ರಂಥಾಲಯಗಳಲ್ಲಿಶಾಲಾ ಮಕ್ಕಳಿಗೆ ಸದಸ್ಯತ್ವ ನೀಡಲಾಗಿದೆ. ಇದರ ಪ್ರಗತಿಯನ್ನು ಪರಿಶೀಲಿಸಲು ಇಸಿಒಗಳಿಗೆ ಸೂಚಿಸಿದರು.

Advertisement

ಶಾಲೆಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೆಸಂಬಂಧಿಸಿದಂತೆ ಪಿಡಿಒಗಳನ್ನು ಸಂಪರ್ಕಿಸಿ, ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ ಅವರು, ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಗಮನಹರಿಸಲು ಇಸಿಒಗಳಿಗೆ ಸಲಹೆ ನೀಡಿದರು.

ಹರಾಜು ಹಾಕಿ: ಶಾಲೆಗಳಲ್ಲಿನ ಹಳೆಯ ಸಾಮಗ್ರಿಗಳು, ಹಾಳಾದ ವಸ್ತುಗಳನ್ನುಸಂಗ್ರಹಿಸಬೇಡಿ, ಕೂಡಲೇ ಎಸ್‌ಡಿಎಂಸಿ ಅನುಮತಿ ಪಡೆದು ಹರಾಜು ಹಾಕಿ ವಿಲೇವಾರಿ ಮಾಡಿ ಎಂದುಮುಖ್ಯ ಶಿಕ್ಷಕರಿಗೆ ಸೂಚಿಸಿದ ಬಿಇಒ, ಈ ಸಂಬಂಧಈಗಾಗಲೇ ಇ-ವೇಸ್ಟ್‌ ಕುರಿತು ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶಾಲೆಗಳ ಆವರಣವನ್ನು ಸುಂದರಗೊಳಿಸಿ ಗಿಡಮರ ಬೆಳೆಸಿ, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆಮುಖ್ಯಶಿಕ್ಷಕರೊಂದಿಗೆ ಎಲ್ಲಾ ಶಿಕ್ಷಕರು ಸಹಕಾರ ನೀಡಿಎಂದು ತಿಳಿಸಿದರು. ಸಭೆಯಲ್ಲಿ ಕಚೇರಿ ವ್ಯವಸ್ಥಾಪಕಮುನಿಸ್ವಾಮಿಗೌಡ,ಇಸಿಒಗಳಾದ ಮುನಿರತ್ನಯ್ಯಶೆಟ್ಟಿ,ರಾಘವೇಂದ್ರ, ಆರ್‌.ಶ್ರೀನಿವಾಸನ್‌, ಭೈರೆಡ್ಡಿ, ವೆಂಕಟಾಚಲಪತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next