Advertisement
ಮಾ. 3ರಿಂದ 10ರ ವರೆಗೆ ಮೌಖೀಕ ಪರೀಕ್ಷೆಗಳನ್ನು ಮತ್ತು ಮಾ. 13ರಿಂದ 18ರ ವರೆಗೆ ಲಿಖೀತ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ.ಮಾ. 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವುದರಿಂದ ಕೆಲವು ಪರೀûಾ ಕೇಂದ್ರಗಳಲ್ಲಿ ಮೌಲ್ಯಂಕನ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಒಂದೇ ದಿನ ನಡೆಯಬೇಕಾಗಿದೆ. ಆದ್ದರಿಂದ 5 ಮತ್ತು 8ನೇ ತರಗತಿಗಳ ಮೌಲ್ಯಂಕನವನ್ನು ಅಪರಾಹ್ನ 2.30ರಿಂದ 4.30ರ ವರೆಗೆ ನಡೆಸುವಂತೆ ಸೂಚಿಸಲಾಗಿದೆ.
8ನೇ ತರಗತಿಯಲ್ಲಿ ಪ್ರಥಮ ಭಾಷೆ-ಇಂಗ್ಲಿಷ್ (ಎನ್‌ಸಿಇಆರ್‌ಟಿ) ಮತ್ತು ತೃತೀಯ ಭಾಷೆ- ಹಿಂದಿ ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ವಿಶೇಷ ಶಾಲೆಗಳ ಮಕ್ಕಳಿಗೆ ಹಿಂದಿನ ಸಾಲಿನಲ್ಲಿ ನಡೆಸಿರುವಂತೆಯೇ ಮೌಲ್ಯಂಕನ ನಡೆಸುವುದು. ಈ ಪರೀಕ್ಷೆಗಳಿಗೂ ಮೊದಲೇ ದೈಹಿಕ ಶಿಕ್ಷಣ ಸೇರಿ ಇತರ ಪರೀಕ್ಷೆಗಳನ್ನು ನಡೆಸಬೇಕು.
ದಿನಾಂಕ 5ನೇ ತರಗತಿ 8ನೇ ತರಗತಿ
ಮಾ.13 ಪರೀಕ್ಷೆ ಇಲ್ಲ ಪ್ರಥಮ ಭಾಷೆ
ಮಾ.14 ಪರೀಕ್ಷೆ ಇಲ್ಲ ದ್ವಿತೀಯ ಭಾಷೆ
ಮಾ.15 ಪ್ರಥಮ ಭಾಷೆ
ಮಾ.16 ಗಣಿತ ಗಣಿತ
ಮಾ.17 ಪರಿಸರ ಅಧ್ಯಯನ ವಿಜ್ಞಾನ
ಮಾ.18 ದ್ವಿತೀಯ ಭಾಷೆ