Advertisement

5 ಕೆ.ಜಿ. ಚಿನ್ನದ ಪೇಸ್ಟ್ ವಶಕ್ಕೆ

10:27 AM Oct 09, 2021 | Team Udayavani |

ಬೆಂಗಳೂರು: ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಕೋಟ್ಯಂ ತರ ರೂ. ಮೌಲ್ಯದ ಚಿನ್ನಾಭರಣ ಮತ್ತು ಚಿನ್ನದ ಪೇಸ್ಟ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ 21 ಮಂದಿಯನ್ನು ಬಂಧಿಸಿದ್ದಾರೆ.

Advertisement

ಶಾರ್ಜಾ ಮತ್ತು ದುಬೈನಿಂದ ಗುದದ್ವಾರದಲ್ಲಿ ಚಿನ್ನದ ಪೇಸ್ಟ್‌ ಇಟ್ಟುಕೊಂಡು ಬಂದಿದ್ದ 18 ಮಂದಿ ಪ್ರಯಾಣಿಕರನ್ನು ಏರ್‌ಪೋರ್ಟ್‌ನ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದು, ಅವರಿಂದ 2.35 ಕೋಟಿ ರೂ. ಮೌಲ್ಯದ 4.944 ಗ್ರಾಂ ಚಿನ್ನದ ಪೇಸ್ಟ್‌ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ಪೈಕಿ 17 ಮಂದಿ ಶಾರ್ಜಾದಿಂದ ಮತ್ತು ಒಬ್ಬ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಕಸ್ಟಮ್ಸ್‌ ಅಧಿಕಾರಿಗಳು ದೇಹವನ್ನು ಸ್ಕ್ಯಾನಿಂಗ್‌ ಮಾಡಿಸಿದಾಗ ಚಿನ್ನದ ಪೇಸ್ಟ್‌ ಪತ್ತೆಯಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಹೇಳಿದರು.

ಮತ್ತೊಂದು ಪ್ರಕರಣದಲ್ಲಿ ಪ್ಯಾಂಟ್‌ ಮತ್ತು ಒಳ ಉಡುಪುಗಳಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಏರ್‌ ಅರೇಬಿಯಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕನಿಂದ 421.45 ಗ್ರಾಂನ ಚಿನ್ನದ ಪುಡಿ, ಬಳೆ ಮತ್ತು ಚಿನ್ನದ ಬಿಸ್ಕತ್ತುಗಳ ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಶಾರ್ಜಾದಿಂದ ಬೆಂಗಳೂರಿಗೆ ಬರುತ್ತಿದ್ದ 47 ವರ್ಷದ ಆಂಧ್ರಪ್ರದೇಶದ ಕಡಪ ಮೂಲದ ಪ್ರಯಾಣಿಕ 116.48 ಗ್ರಾಂ ತೂಕದ ಚಿನ್ನದ ಬಿಸ್ಕತ್ತುಗಳು ಮತ್ತು 126.88 ಗ್ರಾಂ ತೂಕದ 3 ಬಳೆಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದಲ್ಲಿ ತಮಿಳುನಾಡಿನ ತಿರುಚಿರಾಪಳ್ಳಿಯ 52 ವರ್ಷದ ಪ್ರಯಾಣಿಕ ತನ್ನ ಬ್ಯಾಗ್‌ನಲ್ಲಿ ತುಂಬಿದ್ದ ಒಳ ಉಡುಪುಗಳ ಹಾಕಿರುವ ಬಾಕ್ಸ್‌ನಲ್ಲಿ ಬಂಗಾರದ ಪುಡಿಯನ್ನು ಸಾಗಿಸುತ್ತಿದ್ದ. ಈತನ ಬ್ಯಾಗ್‌ ಅನ್ನು ಪರೀಕ್ಷೆಗೊಳಪಡಿಸಿದಾಗ 178.09 ಗ್ರಾಂ ಚಿನ್ನ ಹಾಗೂ ಚಿನ್ನದ ಪುಡಿ ಪತ್ತೆಯಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದರು.

Advertisement

ಇದನ್ನೂ ಓದಿ:- ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ

ಡ್ರಗ್ಸ್‌ ಮಾರಾಟ: ಬಂಧನ

ಬೆಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣ ಸಂಬಂಧ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ. ನೈಜೀರಿಯಾ ಮೂಲದ ಅಗುಂಟಾ ಚುಕುವಾಕಾ ಡ್ಯಾನಿಲ್‌(24) ಮತ್ತು ಕಾವಲ್‌ ಭೈರಸಂದ್ರದ ನಿವಾಸಿ ಮೊಹಮ್ಮದ್‌ ಜೈದ್‌(30) ಬಂಧಿತರು. ಮತ್ತೂಬ್ಬ ಆರೋಪಿ ಲಕ್ಕಸಂದ್ರ ನಿವಾಸಿ ಮೊಹಮ್ಮದ್‌ ಅಸ್ಲಾಂ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತರಿಂದ ಮೂರು ಲಕ್ಷ ರೂ. ಮೌಲ್ಯದ 46 ಎಂಡಿಎಂಎ ಎಕ್ಸ್ಟೆಸಿ ಮಾತ್ರೆಗಳು, ಎರಡು ಮೊಬೈಲ್‌, ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳು ಇತ್ತೀಚೆಗೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ಸಹಕಾರ ನಗರಕ್ಕೆ ದ್ವಿಚಕ್ರದಲ್ಲಿ ಬಂದು ವಿದ್ಯಾರ್ಥಿಗಳು, ಟೆಕ್ಕಿಗಳು ಮಾರಾಟ ಮಾಡುತ್ತಿದ್ದರು.

ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಆರೋಪಿಗಳ ಪೈಕಿ ನೈಜೀರಿಯಾ ಪ್ರಜೆ ಅಗುಂಟಾ ಚುಕುವಾಕಾ ಡ್ಯಾನಿಲ್‌, ಕಳೆದ ಏಪ್ರಿಲ್‌ನಲ್ಲಿ ಕೋಕೇನ್‌ ಮಾರಾಟದ ವೇಳೆ ಕೊತ್ತನೂರು ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಸೇರಿದ್ದ. ಇದೀಗ ಜೈಲಿನಿಂದ ಬಿಡುಗಡೆಯಾಗಿ ಬಂದು ಮತ್ತೇ ಅದೇ ದಂಧೆಯಲ್ಲಿ ತೊಡಗಿದ್ದಾನೆ. ಡ್ಯಾನಿಲ್‌, ದೆಹಲಿಯಲ್ಲಿರುವ ತನ್ನ ದೇಶದ ಪ್ರಜೆ ಮೂಲಕ ಮಾದಕ ವಸ್ತು ತರಿಸಿ ತನ್ನ ಸಹಚರರ ಜತೆ ಸೇರಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next