Advertisement

ಫ‌ಸ್ಟ್‌ಲುಕ್‌ನಲ್ಲಿ ಹೊರಬಂತು 5ಡಿ

11:00 AM Jul 14, 2021 | Team Udayavani |

ನಟ ಆದಿತ್ಯ, ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ, ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “5 ಡಿ’ ಚಿತ್ರದ ಫ‌ಸ್ಟ್‌ ಲುಕ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಯಿತು.ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಹಿರಿಯವಕೀಲ ಶಂಕರಪ್ಪ, ಹಿರಿಯ ನಿರ್ದೇಶಕ ಎಸ್‌. ವಿ ರಾಜೇಂದ್ರ ಸಿಂಗ್‌ ಬಾಬು ಮೊದಲಾದವರುಕಾರ್ಯಕ್ರಮದಲ್ಲಿ ಹಾಜರಿದ್ದು, “5 ಡಿ’ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಗೊಳಿಸಿದರು.

Advertisement

ಇದೇ ವೇಳೆ ಮಾತನಾಡಿದ ನಟ ಆದಿತ್ಯ, “ಸಿನಿಮಾದ ಫ‌ಸ್ಟ್‌ಲುಕ್‌ ಚೆನ್ನಾಗಿ ಬಂದಿದೆ. ನನ್ನ ವೃತ್ತಿ ಜೀವನದಲ್ಲಿ ಖಂಡಿತವಾಗಿಯೂ ಇದೊಂದು ಒಳ್ಳೆಯ ಸಿನಿಮಾ. ಸಿನಿಮಾದಲ್ಲಿ ನನಗೆ ವಿಭಿನ್ನಕಾಸ್ಟ್ಯೂಮ್, ಗೆಟಪ್‌ ಇರೋದ್ರರಿಂದಕುತೂಹಲ ಹುಟ್ಟಿಸುವಂತಿದೆ.

ಇದನ್ನೂ ಓದಿ: ಸೆಪ್ಟೆಂಬರ್‌ ಮೊದಲ ವಾರ  ಕೆಜಿಎಫ್-2 ರಿಲೀಸ್‌?

ಸದ್ಯಕ್ಕೆ ನಿರ್ದೇಶಕರ ಅನುಮತಿ ಇಲ್ಲದೆ ಸಿನಿಮಾದ ಬಗ್ಗೆ ಹೆಚ್ಚೇನೂ ಮಾಹಿತಿ ನೀಡುವಂತಿಲ್ಲ. ಆದಷ್ಟುಬೇಗ ಸಿನಿಮಾವನ್ನು ಎಲ್ಲರೂ ಥಿಯೇಟರ್‌ನಲ್ಲಿ ನೋಡಿರಿ’ ಎಂದುಕೇಳಿಕೊಂಡರು. ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ಅದಿತಿ

ಪ್ರಭುದೇವ, “ಈಗಾಗಲೇ “5 ಡಿ’ ಮೊದಲ ಹಂತದ ಶೂಟಿಂಗ್‌ ಮುಗಿದೆ. ಲಾಕ್‌ ಡೌನ್‌ನಿಂದ ಎರಡನೇ ಶೆಡ್ನೂಲ್‌ ಶೂಟಿಂಗ್‌ ನಿಲ್ಲಿಸಲಾಗಿದ್ದು, ಸಿನಿಮಾದ ಪಾತ್ರ ತುಂಬಖುಷಿ ಕೊಡುತ್ತಿದೆ. ಲಾಕ್‌ಡೌನ್‌ ನಂತರ ಈ ಸಿನಿಮಾದ ಮೂಲಕ ಮತ್ತೆ ನನ್ನ ಕೆಲಸ ಶುರುವಾಗಿದೆ’ ಎಂದು ಸಂತಸ ಹಂಚಿಕೊಂಡರು. ವೇದಿಕೆಯಲ್ಲಿ ನಿರ್ದೇಶಕ ಎಸ್‌.ನಾರಾಯಣ್‌, ಸೇರಿದಂತೆ ಚಿತ್ರತಂಡದ ಇತರರು “5 ಡಿ’ಬಗ್ಗೆತಮ್ಮ ಅನುಭವ ಹಂಚಿಕೊಂಡರು.

Advertisement

“ಒನ್‌ ಟು ಹಂಡ್ರೆಡ್‌ ಡ್ರಿಮ್ಸ್‌ ಮೂವೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸ್ವಾತಿ ಕುಮಾರ್‌ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸದ್ಯ “5 ಡಿ’ ಎರಡನೇ ಹಂತದ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next