Advertisement

ಒಂದು ನಿಮಿಷಕ್ಕೆ 59 ಸೆಕೆಂಡುಗಳು!

02:41 PM Sep 19, 2017 | |

ದಿನವೂ ಗಣಿತದ ಪಾಠ ಹೇಳುವ ಮೇಷ್ಟ್ರಿಗೆ ಸಮಾಜ ವಿಜ್ಞಾನದ ಪರಿಚಯವಿರಲ್ಲ ಎಂಬುದು ವಿದ್ಯಾರ್ಥಿಯ ನಂಬಿಕೆಯಾಗಿತ್ತೇನೋ. ಆತ ಮೇಷ್ಟ್ರು ಪಾಠಕ್ಕೆ ತಲೆದೂಗಿದೆ ಒಂದರ ಹಿಂದೊಂದು ಪ್ರಶ್ನೆ ಕೇಳಲು ಆರಂಭಿಸಿದ…

Advertisement

ನಾನು ಗಣಿತ ಶಿಕ್ಷಕನಾಗಿದ್ದರೂ ಅದೊಂದು ದಿನ ಐದನೇ ತರಗತಿಯ ಸಮಾಜ ವಿಜಾnನದ ಪಾಠ ಬೋಧಿಸುವ ಹೊಸದೊಂದು ಜವಾಬ್ದಾರಿಯನ್ನು ಮುಖ್ಯೋಪಾಧ್ಯಾಯರು ನನ್ನ ಹೆಗಲಿಗೇರಿಸಿದ್ದರು. “ನಮ್ಮ ರಾಷ್ಟ್ರೀಯ ಚಿಹ್ನೆಗಳು’ ಎಂಬ ವಿಷಯ ಕುರಿತು ನಮ್ಮ ರಾಷ್ಟ್ರಪಕ್ಷಿ$ ನವಿಲು, ರಾಷ್ಟ್ರಪ್ರಾಣಿ ಹುಲಿ, ರಾಷ್ಟ್ರಗೀತೆ ಜನಗಣಮನ, ರಾಷ್ಟ್ರೀಯ ಲಾಂಛನ ನಾಲ್ಕು ಮುಖದ ಸಿಂಹ… ಹೀಗೇ ಪಾಠ ಮುಂದುವರಿಯುತ್ತಿತ್ತು. ನಾಲ್ಕು ಮುಖದ ಸಿಂಹಕ್ಕೆ ನೋಟು ಮತ್ತು ನಾಣ್ಯಗಳಲ್ಲಿರುವ ಚಿತ್ರವನ್ನು ಉದಾಹರಣೆಯಾಗಿ ನೀಡಿದೆ. 

ತಕ್ಷಣ ಎದ್ದು ನಿಂತ ಒಬ್ಬ ವಿದ್ಯಾರ್ಥಿ, “ಸರ್‌, ಅದು ನಾಲ್ಕು ಮುಖದ ಸಿಂಹ ಅಲ್ಲ. ಮೂರು ಮುಖದ ಸಿಂಹ ಸರ್‌’ ಎಂದ. “ಚಿತ್ರದಲ್ಲಿ ಕಾಣಿಸೋದು ಮೂರೇ ಮುಖ ನಿಜ. ಆದ್ರೆ ಹಿಂದಿನ ಮುಖ ಚಿತ್ರದಲ್ಲಿ ಕಾಣಿಸಲ್ಲ ಪುಟ್ಟ, ಅದು ನಾಲ್ಕು ಮುಖದ ಸಿಂಹವೇ’ ಎಂದೆ. ನನ್ನ ಸಮರ್ಥನೆ ಅವನ ಸಂಶಯವನ್ನು ದೂರ ಮಾಡಲಿಲ್ಲವೆಂದು ಅವನ ಮುಖಭಾವವೇ ಹೇಳುತ್ತಿತ್ತು. 
ಇವನ ಈ ಕಲ್ಪನೆಗೆ ಇದು ಸರಿಯಾದ ಉತ್ತರವಲ್ಲವೆಂದು ಭಾವಿಸಿ, ನಮ್ಮದೇ ಜಿಲ್ಲೆಯ ಉದಾಹರಣೆ ಕೊಟ್ಟೆ. ನಮ್ಮ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಅಶೋಕ ಸರ್ಕಲ್‌ ಇದೆಯಲ್ವಾ? ಅಲ್ಲಿ ಹೋದಾಗ ಸರಿಯಾಗಿ ಗಮನಿಸಿ ನೋಡಿ. ಅದು ನಿಜವಾದ ನಾಲ್ಕು ಮುಖದ ಸಿಂಹ ಎಂದು ಸ್ಪಷ್ಟಪಡಿಸಿದೆ. ತಕ್ಷಣವೇ ಅವನು, “ಅಯ್ಯೋ, ಅದನ್ನ ತುಂಬಾ ಸಲ ನೋಡಿದೀನಿ ಸರ್‌. ಅಲ್ಲೂ ಮೂರೇ ಮುಖಗಳು ಕಾಣೊÕàದು’ ಅಂದ. ಅದಕ್ಕೆ ನಾನು “ಅಯ್ಯೋ ದಡ್ಡ, ಅದರ ಹಿಂದುಗಡೆ ಒಂದು ಮುಖ ಇರುತ್ತೆ. ಆ ಕಡೆ ನಿಂತು ನೋಡಿದ್ರೆ ಅದೂ ಕಾಣಿಸುತ್ತೆ. ಬೇಕಾದ್ರೆ ಇನ್ನೊಮ್ಮೆ ಹೋದಾಗ ಸರಿಯಾಗಿ ಗಮನಿಸು’ ಎಂದೆ. ನನ್ನ ವಾದವನ್ನು ಆ ವಿದ್ಯಾರ್ಥಿ ಸ್ವಲ್ಪವೂ ಒಪ್ಪಲಿಲ್ಲ. “ಸರ್‌, ನೀವು ಏನೇ ಹೇಳಿ, ಯಾವ ಕಡೆ ನಿಂತು ನೋಡಿದ್ರೂ ಮೂರು ಮುಖಗಳು ಮಾತ್ರ ಕಾಣೊದು. ನಾಲ್ಕು ಮುಖಗಳು ಕಾಣೊದೇ ಇಲ್ಲ ಸರ್‌’ ಅಂದ!

    ಗಣಿತ ಶಿಕ್ಷಕರಾಗಿರುವ ಈ ಮೇಷ್ಟ್ರು ಇವತ್ತು ಮಾತ್ರ ನಮಗೆ ಸಮಾಜ ವಿಜಾnನ ಬೋಧಿಸುತ್ತಿದ್ದಾರೆ, ಈ ಮೇಷ್ಟ್ರಿಗೆ ಸಮಾಜ ವಿಜ್ಞಾನದ ಬಗ್ಗೆ ಏನೂ ಗೊತ್ತಿಲ್ಲವೆಂಬ ಭಾವನೆಯಿಂದಲೋ ಅಥವಾ ಎತ್ತ ನಿಂತು ನೋಡುವಾಗಲೂ ಹಿಂದಿನ ಮುಖ ಮರೆಯಾಗಿ ಕೇವಲ ಮೂರೇ ಮುಖಗಳು ಕಾಣಿಸುವುದನ್ನು ಸಮರ್ಥಿಸಿಕೊಳ್ಳಲೋ ಆತ ಯತ್ನಿಸುತ್ತಿದ್ದ. ಅವನ ಈ ತಾರ್ಕಿಕ ಆಧಾರದ ಪ್ರಶ್ನೆಯನ್ನು ಒಪ್ಪಲೇಬೇಕಾಗಿದ್ದರೂ ನನಗೆ ಅವನ ಪ್ರಶ್ನೆಯಿಂದ ಮುಜುಗರವಾದದ್ದು ನಿಜ. ಅದೇ ಕಾರಣಕ್ಕೆ, ಆ ವಿದ್ಯಾರ್ಥಿ ನನ್ನ ಕೋಪಕ್ಕೆ ಗುರಿಯಾಗಿದ್ದೂ ನಿಜ. ಇನ್ನೂ ಯಾವ ವಿಭಿನ್ನ ಉದಾಹರಣೆಯಿಂದಾದರೂ ಇವನ ಗೊಂದಲವನ್ನು ಹೋಗಲಾಡಿಸಬೇಕೆಂದು ಯೋಚಿಸುವಷ್ಟರಲ್ಲಿ ಗಂಟೆ ಬಾರಿಸಿತ್ತು. ಅಂದಿನಿಂದ ಇಂದಿನವರೆಗೂ ಸಮಾಜದ ತಂಟೆಗೆ ಹೋಗದೇ ಬಚಾವಾಗಿದ್ದೇನೆ.

ಗಣಿತದ ವಿಷಯಕ್ಕೆ ಬಂದಾಗ ಇಂಥವರ ಕಾಟ ಇಲ್ಲವೆಂದೇನಿಲ್ಲ. ಕಾಲ ಘಟಕದ ಸಂಗತಿಯನ್ನು ಬೋಧಿಸುವಾಗ ಒಂದು ನಿಮಿಷಕ್ಕೆ 60 ಸೆಕೆಂಡ್‌, ಒಂದು ಗಂಟೆಗೆ 60 ನಿಮಿಷ ಎಂಬುದನ್ನು ಸುತಾರಾಂ ಒಪ್ಪದೇ, ಒಂದು ನಿಮಿಷಕ್ಕೆ 59 ಸೆಕೆಂಡ್‌ಗಳು ಹಾಗೇ ಒಂದು ಗಂಟೆಗೆ 59 ನಿಮಿಷಗಳು ಎನ್ನುವ “ವಿದ್ಯಾರ್ಥಿ’ ತಣ್ತೀಜಾnನಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಏಕೆಂದರೆ, ಯಾವುದೇ ಗಡಿಯಾರದಲ್ಲಿ 59 ಆದ ನಂತರ ಬರೋದೇ 00. ಅಲ್ಲಿ 60 ಅಂತ ಬರೋದೇ ಇಲ್ಲ ಅನ್ನೋದೇ ಅವರ ವಾದ. ಇಂಥವರ ಅಗಾಧ ಪಾಂಡಿತ್ಯವು ಶಿಕ್ಷಕರ ದಿಕ್ಕು ತಪ್ಪಿಸುವುದಂತೂ ಶತಸಿದ್ಧ.

Advertisement

    ಶಾಲಾ ತರಗತಿಯಲ್ಲಿ ಕೆಲವೊಮ್ಮೆ ಮಕ್ಕಳು ಶಿಕ್ಷಕರಿಗೆ ಕೇಳುವ ತರಲೆ, ತಾರ್ಕಿಕ ಪ್ರಶ್ನೆಗಳು ಎಂಥ ತಣ್ತೀಜಾnನಿಯಂಥ ಶಿಕ್ಷಕನನ್ನೂ ಕೆಲ ಕ್ಷಣ ತಬ್ಬಿಬ್ಬುಗೊಳಿಸುವಂತಿರುತ್ತವೆ. ಆ ಕ್ಷಣದಲ್ಲಿ ಆ ಶಿಕ್ಷಕನಿಗೆ ಉಂಟಾಗುವ ಇರಿಸು-ಮುರಿಸುತನದಿಂದಾಗಿ ಅಂಥ ಪ್ರಶ್ನೆ ಕೇಳುವ ವಿದ್ಯಾರ್ಥಿ ಆ ಶಿಕ್ಷಕನಿಗೆ ತಾತ್ಕಾಲಿಕ ವೈರಿಯಂತೆ ಕಾಣಿಸುತ್ತಾನೆ. ಬಹುಶಃ ಇಂಥ ಸಣ್ಣ ಪುಟ್ಟ ಘಟನೆಗಳೇ ಮುಂದಿನ ದಿನಗಳ ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸಿ ಭಾವನಾತ್ಮಕ ಬೆಸುಗೆ ಹಾಕಿ ಭದ್ರಗೊಳಿಸುತ್ತವೆ ಎಂದರೆ ತಪ್ಪಾಗಲಾರದು.
  
ಸೋಮಲಿಂಗಪ್ಪ ಬೆಣ್ಣಿ

Advertisement

Udayavani is now on Telegram. Click here to join our channel and stay updated with the latest news.

Next