Advertisement

ಎರಡು ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 58 ಲಕ್ಷ ರೂ. ವಶ

03:07 PM Mar 25, 2023 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ದಾಖಲೆ‌ ಇಲ್ಲದೇ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ನಗದನ್ನು ಜಪ್ತಿ‌‌ ಮಾಡಿಕೊಳ್ಳಲಾಗಿದೆ.

Advertisement

ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ದೇವಣಗಾಂವ್ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ದಾಖಲೆ ಇಲ್ಲದ ಕೆಎಲ್ 56 ಪಿ 1919 ಸಂಖ್ಯೆಯ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 9 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ.

ದಾಖಲೆ ಇಲ್ಲದ ಕಾರಣ ಪೊಲೀಸರು ಸದರಿ ನಗದು ಹಣ ಜಪ್ತಿ ಮಾಡಿದ್ದಾರೆ. ಈ ಕುರಿತು ಆಲಮೇಲ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಇಂಡಿ ತಾಲೂಕಿನ ಧೂಳಖೇಡ ಚೆಕ್ ಪೋಸ್ಟಿನಲ್ಲೂ ದಾಖಲೆ ಇಲ್ಲದ ನಗದು ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರದ ಸೋಲಾಪೂರ ದಿಂದ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣಕ್ಕೆ 407 ಕ್ಯಾಂಟರ್ ವಾಹನದಲ್ಲಿ  ದಾಖಲೆ ಇಲ್ಲದೆ ಸಾಗಿಸುತ್ತಿದ್ದ 49 ಲಕ್ಷ ರೂ. ನಗದು ಪತ್ತೆಯಾಗಿದೆ.

ಇದನ್ನೂ ಓದಿ: ಗಂಗಾವತಿ: ದಾಖಲೆ ಇಲ್ಲದೇ 60 ಲಕ್ಷ ರೂ.ಸಾಗಾಟ; ನಗದು ಸಮೇತ ಕಾರು ವಶಕ್ಕೆ

Advertisement

ಸದರಿ ವಾಹನ ಚಾಲಕ ತನ್ನ ಸೀಟ್ ಕೆಳಭಾಗದಲ್ಲಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ. ಆತನ ಶಂಕ್ಯಾಸ್ಪದ ವರ್ತನೆಯಿಂದ ಅನುಮಾನಗೊಂಡ ಇಂಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 49 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ.

ಸದರಿ ಹಣ ಇಂಡಿ ಪಟ್ಟಣದ‌ ಎಪಿಎಂಸಿ ವರ್ತಕರೊಬ್ಬರಿಗೆ ಸೇರಿದ ದಾಖಲೆ ಇಲ್ಲದೆ ನಗದು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಚುನಾವಣೆ ಆಯೋಗದ ನಿರ್ದೇಶನದಂತೆ ಈ ಕುರತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next