Advertisement
ಅವರು ರವಿವಾರ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ಜಂಟಿಯಾಗಿ ಏರ್ಪಡಿಸಿದ ಸಮಾವೇಶದಲ್ಲಿ ಮಾತನಾಡಿದರು.
Related Articles
ರಾಜ್ಯ ಸರಕಾರವನ್ನು ಅಸ್ಥಿರಗೊಳಿ ಸುವ ತಂತ್ರ ರೂಪಿಸುತ್ತಿದ್ದ ಬಿಜೆಪಿಯವರು ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ. ಸರಕಾರಕ್ಕೆ ಪದೇಪದೇ ಗಡುವು ನೀಡುವ ಮೂಲಕ ಅಧಿಕಾರಿಗಳು ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸದಂತೆ ತಡೆಯು ತ್ತಿದ್ದರು. ಇವೆಲ್ಲವುಗಳ ನಡುವೆ ನಾವು ಜನಪರ ಆಡಳಿತ ನೀಡಿದ್ದೇವೆ. ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಪ್ರಚಾರ ಮಾತ್ರ ಸಿಗುತ್ತಿಲ್ಲ ಎಂದರು.
Advertisement
ಒಂದು ಬಾರಿ ಅವಕಾಶ ಕೊಡಿ…ಈ ಬಾರಿ ಪ್ರಮೋದ್ ಮಧ್ವರಾಜ್‌ಅವರಿಗೊಂದು ಅವಕಾಶ ಕೊಡಿ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಮನವಿ ಮಾಡಿಕೊಂಡರು. ಸಚಿವರಾದ ಡಾ| ಜಯಮಾಲಾ, ಯು.ಟಿ. ಖಾದರ್, ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ನಾಯಕರಾದ ಅಮರನಾಥ ಶೆಟ್ಟಿ, ಭೋಜೇಗೌಡ, ಬಿ.ಎಂ. ಫಾರೂಕ್, ಗೋಪಾಲ ಭಂಡಾರಿ, ಯು.ಆರ್. ಸಭಾಪತಿ, ಅಶೋಕ ಕುಮಾರ್ ಕೊಡವೂರು, ಉದಯ ಶೆಟ್ಟಿ ಮುನಿಯಾಲು, ಅಧ್ಯಕ್ಷ ಶೇಖರ್ ಮಡಿವಾಳ, ಯೋಗಿಶ್ ಶೆಟ್ಟಿ ವೇದಿಕೆ ಯಲ್ಲಿದ್ದರು. ಬಿಪಿನ್ ಚಂದ್ರಪಾಲ್ ಸಭೆ ನಿರ್ವಹಿಸಿದರು. ಹಣ ರಾಜ್ಯದ್ದು; ಹೆಸರು ಮೋದಿಯದ್ದು!
ಮೋದಿ 5 ವರ್ಷಗಳಲ್ಲಿ ಮಾಡಿದ್ದು ಭಾಷಣ ಮಾತ್ರ. ಆಯುಷ್ಮಾನ್ ಭಾರತ್ ಯೋಜನೆಗೆ ರಾಜ್ಯ ಸರಕಾರ 900 ಕೋಟಿ ರೂ. ಭರಿಸಿದರೆ, ಕೇಂದ್ರ ನೀಡಿದ್ದು ಕೇವಲ 350 ಕೋಟಿ. ಆದರೆ ಜಾಹೀರಾತಿನಲ್ಲಿ ಮೋದಿ ಚಿತ್ರ ಮಾತ್ರವಿದೆ ಎಂದು ಟೀಕಿಸಿದ ಮುಖ್ಯಮಂತ್ರಿಗಳು, ನರೇಗಾ ಯೋಜನೆಗೆ ಮೋದಿ ಸರಕಾರ ನಯಾ ಪೈಸೆ ನೀಡದೇ ಕಾರ್ಮಿಕ ರನ್ನು ಸಂಕಷ್ಟಕ್ಕೆ ದೂಡಿತ್ತು. ಈ ವೇಳೆ ರಾಜ್ಯ ಸರಕಾರವೇ 1,300 ಕೋಟಿ ರೂ. ಭರಿಸಿದ್ದು ಎಂದರು. – ಸಿಎಂ ಆದ ಬಳಿಕ ಗಲಭೆಯಾಗಿಲ್ಲ
ನಾನು ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ರಾಜಕೀಯಕ್ಕೋಸ್ಕರ ಬಿಜೆಪಿಯು ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ಸೃಷ್ಟಿಸುತ್ತಿದೆ ಎಂದರು. ನನ್ನ ಮನೆಗೆ ಪ್ರತಿದಿನ ಅಂಗವಿಕಲರು, ಆನಾರೋಗ್ಯ ಪೀಡಿತರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಅಂಥವರಿಗೆ ನೆರವಾಗು ವಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 9 ತಿಂಗಳಲ್ಲಿ 85 ಕೋಟಿ ರೂ. ನೀಡಲಾಗಿದೆ. ಹಿರಿಯ ನಾಗರಿಕರ ಮಾಸಾಶನವನ್ನು 1 ಸಾವಿರಕ್ಕೆ ಏರಿಸಲಾಗಿದೆ ಎಂದರು. – ಶೋಭಾ ಮಾತನಾಡಿದ್ದಾರಾ ?
ಅಡಿಕೆ, ತೆಂಗು ಬೆಳೆಗಾರರ ಸಮಸ್ಯೆ, ಮೀನುಗಾರಿಕೆ ಸಮಸ್ಯೆ ಕುರಿತು ಕುರಿತು ಶೋಭಾ ಲೋಕಸಭೆಯಲ್ಲಿ ಮಾತನಾಡಿದ್ದಾರಾ? ನಾಪತ್ತೆ ಯಾದ ಬೋಟ್ ಪತ್ತೆಹಚ್ಚುವಲ್ಲಿ ಕೇಂದ್ರ ಸರಕಾರ ಸ್ಪಂದಿಸಿದೆಯೇ ಎಂದು ಸಿಎಂ ಪ್ರಶ್ನಿಸಿದರು.