Advertisement

ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಮೀನುಗಾರರ ಸಂಖ್ಯೆ ಎಷ್ಟು? ಲೋಕಸಭೆಗೆ ಮಾಹಿತಿ

04:22 PM Mar 25, 2022 | Team Udayavani |

ನವದೆಹಲಿ: ನೆರೆಯ ಪಾಕಿಸ್ತಾನ ನಿರಂತರವಾಗಿ ಮೀನುಗಾರಿಕಾ ಬೋಟ್ ಗಳನ್ನು ಹಾಗೂ ಮೀನುಗಾರರನ್ನು ಸೆರೆಹಿಡಿಯುತ್ತಿರುವ ಘಟನೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದು, ಈಗಾಗಲೇ ನೂರಾರು ಮಂದಿ ಮೀನುಗಾರರು ಪಾಕಿಸ್ತಾನದ ಜೈಲಿನಲ್ಲಿರುವುದಾಗಿ ಶುಕ್ರವಾರ (ಮಾರ್ಚ್ 25) ಲೋಕಸಭೆಗೆ ಮಾಹಿತಿ ನೀಡಲಾಗಿದೆ.

Advertisement

ಇದನ್ನೂ ಓದಿ:ಸರ್ಕಾರ ಕೋಮು ವಿಚಾರಕ್ಕೆ ನೀಡಿದಷ್ಟು ಆಸಕ್ತಿ ಕೋವಿಡ್ ಪರಿಹಾರಕ್ಕೆ ನೀಡುತ್ತಿಲ್ಲ: ಕಾಂಗ್ರೆಸ್

ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ತಿಳಿಸಿರುವಂತೆ, 2008ರ ಮೇ 21ರ ಭಾರತ, ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಪ್ರವೇಶ ಒಪ್ಪಂದದ ಪ್ರಕಾರ, ಉಭಯ ದೇಶಗಳ ನಾಗರಿಕ ಮತ್ತು ಮೀನುಗಾರ ಕೈದಿಗಳ ಪಟ್ಟಿಯನ್ನು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ.

2022ರ ಜನವರಿ 1ರಂದು ವಿನಿಮಯ ಮಾಡಿಕೊಂಡ ಪಟ್ಟಿಯ ಪ್ರಕಾರ, ಪಾಕಿಸ್ತಾನದ ಜೈಲಿನಲ್ಲಿ 577 ಭಾರತೀಯ ಮೀನುಗಾರರು ಅಥವಾ ಭಾರತೀಯರು ಎಂದು ನಂಬಲಾಗಿರುವ ಕೈದಿಗಳು ಇದ್ದಿರುವುದಾಗಿ ಪ್ರಶ್ನೋತ್ತರ ವೇಳೆಯಲ್ಲಿ ಮುರಳೀಧರನ್ ತಿಳಿಸಿದ್ದಾರೆ.

ಅಷ್ಟೇ ಅಲ್ಲ ಸುಮಾರು 1,164 ಭಾರತೀಯ ಮೀನುಗಾರಿಕಾ ಬೋಟ್ ಗಳು ಪಾಕಿಸ್ತಾನದ ವಶದಲ್ಲಿದೆ ಎಂದು ಸಚಿವರು ವಿವರ ನೀಡಿದ್ದಾರೆ. ಏತನ್ಮಧ್ಯೆ ಪಾಕಿಸ್ತಾನದ ಬಳಿ ಭಾರತದ ಎಷ್ಟು ಬೋಟ್ ಗಳು ಇವೆ ಎಂಬ ನಿಖರವಾದ ಮಾಹಿತಿ ಇಲ್ಲ ಎಂದು ಹೇಳಿದರು.

Advertisement

ಮೀನುಗಾರರು ಹಾಗೂ ಮೀನುಗಾರಿಕಾ ಬೋಟ್ ಗಳನ್ನು ಬಿಡುಗಡೆಗೊಳಿಸಲು ಕಾನೂನು ನೆರವು ಸೇರಿದಂತೆ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ 2014ರಿಂದ ಈವರೆಗೆ 2,140 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದ್ದು, 57 ಭಾರತೀಯ ಮೀನುಗಾರಿಕಾ ಬೋಟ್ ಗಳನ್ನು ಮರಳಿಸಿರುವುದಾಗಿ ಮುರಳೀಧರನ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next