Advertisement

Mangalore: ಷೇರುಗಳಲ್ಲಿ ಹೂಡಿಕೆ ಹೆಸರಿನಲ್ಲಿ 57.46 ಲಕ್ಷ ರೂ. ವಂಚನೆ

11:28 PM Feb 07, 2024 | Team Udayavani |

ಮಂಗಳೂರು: ಷೇರುಗಳಲ್ಲಿ ಹೂಡಿಕೆ ಹೆಸರಿನಲ್ಲಿ ನಾಲ್ವರಿಂದ ಒಟ್ಟು 57.46 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ನಿಶ್ಚಿತ್‌ ಡಿ’ಸೋಜಾ, ಲ್ಯಾನ್ಸಲ್‌ ಡಿ’ಸೋಜಾ, ನಮಿತಾ ಡಿ’ಸೋಜಾ ಮತ್ತು ಅಮರ್‌ ರಾವ್‌ ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್‌ ಸಂಖ್ಯೆ 7252878942 ರಿಂದ ನಿಶ್ಚಿತ್‌ ಅವರಿಗೆ ಕರೆ ಮಾಡಿ Pantheon Group, UK ಕಂಪೆನಿಯಲ್ಲಿ ಷೇರುಗಳನ್ನು ಖರೀದಿಸುವಂತೆ ತಿಳಿಸಿ ಆ್ಯಂಡ್ರಾಯಿಡ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡುವಂತೆ ಹೇಳಿ ಲಿಂಕ್‌ ಕಳುಹಿಸಿದ.

ನಿಶ್ಚಿತ್‌ ಆ್ಯಪನ್ನು ಡೌನ್‌ಲೋಡ್‌ ಮಾಡಿ ಅದರಲ್ಲಿ ಲಾಗಿನ್‌ ಆಗಿ ಡಿ.18ರಿಂದ ಜ.23ರ ಅವಧಿಯಲ್ಲಿ 32.71 ಲಕ್ಷ ರೂ., ಅವರ ಸ್ನೇಹಿತರಾದ ಲ್ಯಾನ್ಸಲ್‌ ಡಿ’ಸೋಜಾ 8 ಲಕ್ಷ ರೂ, ನಮಿತಾ ಡಿ’ಸೋಜಾ 12 ಲಕ್ಷ ರೂ ಮತ್ತು ಅಮರ್‌ ರಾವ್‌ 4,75,000 ರೂ.ಗಳನ್ನು ಹಂತ ಹಂತವಾಗಿ ಹೂಡಿಕೆ ಮಾಡಿದ್ದರು. ಕೆಲವು ಸಮಯದ ಬಳಿಕ ಹಣವನ್ನು ವಿತ್‌ಡ್ರಾ ಮಾಡಲು ಯತ್ನಿಸಿದಾಗ ವಿತ್‌ಡ್ರಾ ಆಗಲಿಲ್ಲ. ಆಗ ಅವರಿಗೆ ಇದೊಂದು ಮೋಸದ ಜಾಲ ಎಂಬುದು ಗೊತ್ತಾಗಿದೆ. ಮಂಗಳೂರು ನಗರದ ಸೆನ್‌(ಸೈಬರ್‌, ನಾರ್ಕೊಟಿಕ್‌ ಮತ್ತು ಆರ್ಥಿಕ ಅಪರಾಧ) ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next