Advertisement

56 ಅಂಕ ಬಂದಿದ್ದರೂ ಅನುತ್ತೀರ್ಣ!

02:56 AM May 05, 2019 | Sriram |

ಕಾಣಿಯೂರು: ಮೌಲ್ಯ ಮಾಪಕರ ಎಡವಟ್ಟಿನಿಂದಾಗಿ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಯೋರ್ವಳು ಅನುತ್ತೀರ್ಣಳಾದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಶ್ರೀ ಎಸ್‌. ಅವರಿಗೆ 498 ಬಂದಿತ್ತು. ವಿಜ್ಞಾನ ವಿಷಯದಲ್ಲಿ 19 ಅಂಕ ಎಂದು ಪ್ರಕಟಿಸಲಾಗಿತ್ತು.

ಪೋಷಕರು ಅನುಮಾನಗೊಂಡು ಬಳಿಕ ವಿಜ್ಞಾನ ಪತ್ರಿಕೆಯ ಛಾಯಾಪ್ರತಿ ತರಿಸಿ ನೋಡಿದಾಗ ವಿದ್ಯಾರ್ಥಿನಿಗೆ 56 ಅಂಕ ಬಂದಿದೆ. ಆದರೆ ಆಕೆ ಬರೆದ ಉತ್ತರ ಪತ್ರಿಕೆಯ ಸಂಖ್ಯೆ 19 ಆಗಿದ್ದು, ಅದನ್ನೇ ಅಂಕ ಎಂದು ನಮೂದಿಸಿರುವ ಸಾಧ್ಯತೆ ಇದೆ.

ಉತ್ತರ ಸಂಕಲನವೂ ಎಡವಟ್ಟು!
ವಿಜ್ಞಾನ ಉತ್ತರ ಪತ್ರಿಕೆಯಲ್ಲಿ ಅಂಕಗಳನ್ನು ಕೂಡಿಸಿದಾಗ 62 ಅಂಕ ಗಳು ಬರುತ್ತಿದ್ದು, ಮೌಲ್ಯಮಾಪಕರು ಇಲ್ಲೂ ಎಡವಟ್ಟು ಮಾಡಿದ್ದಾರೆ. ಇದೇ ರೀತಿ ಎಡವಟ್ಟಾಗಿ ಹಲವು ವಿದ್ಯಾರ್ಥಿಗಳಿಗೆ ಅಂಕ ಕಡಿತವಾಗಿರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ. ಈ ವ್ಯತಿರಿಕ್ತ ಫಲಿತಾಂಶದಿಂದಾಗಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಸತತ 17ನೇ ಬಾರಿ ಶೇ.100 ಫಲಿತಾಂಶ ತಪ್ಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next