Advertisement

ನಕಲಿ ಬಿಲ್ಲಿಂಗ್‌ ಮೂಲಕ ಬರೋಬ್ಬರಿ 557 ಕೋಟಿ ರೂ. GST ವಂಚನೆ: ಮೂವರ ಬಂಧನ

07:06 PM Jul 28, 2023 | Team Udayavani |

ನವದೆಹಲಿ: ನಕಲಿ ಬಿಲ್ಲಿಂಗ್‌ ಜಾಲದ ಮೂಲಕ ಬರೋಬ್ಬರಿ 557 ಕೋಟಿ ರೂ. ಗಳ ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ನ್ನು ಮೋಸದಿಂದ ಪಾಸ್‌ ಮಾಡಿದ ಮೂವರನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಆರೋಪಿಗಳಿಂದ ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ ಫೊನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಿಂದ ಲೆಡ್ಜರ್‌ಗಳು, ಇನ್‌ವಾಯ್ಸ್‌ಗಳು, ಕೆಲವು ಬಿಲ್‌ಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಅಕ್ರಮದ ಕುರಿತಾಗಿರುವ ವಾಟ್ಸ್‌ಆಪ್‌ ಸಂದೇಶಗಳು ಮತ್ತು ವಾಯ್ಸ್‌ ಮೆಸೇಜ್‌ಗಳು ಅಧಿಕಾರಿಗಳಿಗೆ ಲಭ್ಯವಾಗಿದೆ.

ಆರೋಪಿಗಳು ನಕಲಿ ಸಂಸ್ಥೆಗಳ ಹೆಸರಿನಲ್ಲಿ ಅಕ್ರಮವಾಗಿ ತೆರೆದಿರುವ ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದು ಇದಕ್ಕೆ ಬ್ಯಾಂಕ್‌ ಅಧಿಕಾರಿಗಳೇ ಸಹಾಯ ಮಾಡಿರುವ ಮಾಹಿತಿಯೂ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.

ಆನಂದ್‌ ಕುಮಾರ್‌ ಮತ್ತು ಅಜಯ್‌ ಕುಮಾರ್‌ ಅವರು ನಕಲಿ ಶೆಲ್‌ ಘಟಕಗಳ ಸಿಂಡಿಕೇಟ್‌ಗಳನ್ನು  ತೆರೆದಿದ್ದು ಅದನ್ನು ಭೇದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿಯ ಅಧ್ಯಾಪಕ್‌ ನಗರ ಮತ್ತು ಪಶ್ಚಿಮ ಪುರಿಯಲ್ಲಿರುವ ಇವರ ಕಛೇರಿಗಳಿಂದ ನಕಲಿ ಸ್ಟ್ಯಾಂಪ್‌ಗಳು, ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳು, ಚೆಕ್‌ಬುಕ್‌ಗಳು ಆಧಾರ್‌ ಕಾರ್ಡ್‌ಗಳು, ಪಾನ್‌ ಕಾರ್ಡ್‌ಗಳು ಮುಂತಾದ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎರಡು ಸಿಂಡಿಕೇಟ್‌ಗಳು 246 ನಕಲಿ ಸಂಸ್ಥೆಗಳ ಮೂಲಕ 557 ಕೋಟಿ ರೂ. ಗಳ ITC (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಒಳಗೊಂಡ 3,142 ಕೋಟಿ ತೆರಿಗೆ ವಹಿವಾಟು ಹೊಂದಿರುವ ಇನ್‌ವಾಯ್ಸ್‌ಗಳನ್ನು 1,500 ಕ್ಕೂ ಹೆಚ್ಚು ಫಲಾನುಭವಿಗಳಿಗೆ ನೀಡಿರುವ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.

Advertisement

ಇವರು ಬ್ರೋಕರ್‌ಗಳು ಮತ್ತು ತಮ್ಮ ಸಹವರ್ತಿಗಳ ಜೊತೆಗೆ ಯಾವ ರೀತಿ ಸಂಬಂಧ ಹೊಂದಿದ್ದರು ಎಂದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸದ್ಯಕ್ಕೆ ಇವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿ ದೇಶದ 26 ರಾಜ್ಯಗಳಲ್ಲಿ ಈ ಜಾಲ ವಿಸ್ತರಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ತನಿಖೆ ಆರಂಭವಾದ ಮೊದಲ ಹಂತದಲ್ಲೇ ಇಂತಹ ಸಂಸ್ಥೆಯಂದರ ಮಾಲೀಕ ವಿಕ್ರಮ್‌ ಜೈನ್‌ ಅವರನ್ನು ಬಂಧಿಸಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.

ಸದ್ಯ ಈ ಮೂವರು ಆರೋಪಿಗಳನ್ನು ಮೀರತ್‌ನ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆಗಸ್ಟ್‌ 8 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ತುರ್ತಾಗಿ ದೆಹಲಿಗೆ ಮರಳಿದ ಪ್ಯಾರಿಸ್‌ಗೆ ಹೊರಟಿದ್ದ ಏರ್ ಇಂಡಿಯಾ

Advertisement

Udayavani is now on Telegram. Click here to join our channel and stay updated with the latest news.

Next