Advertisement

ರಾಜರಾಜೇಶ್ವರಿ ನಗರದಲ್ಲಿ ಶೇ.55ರಷ್ಟು ಮತದಾನ

06:15 AM May 29, 2018 | Team Udayavani |

ಬೆಂಗಳೂರು: ಖಾಸಗಿ ಕಟ್ಟಡದಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾದ ಪ್ರಕರಣದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾನ ಪೊಲೀಸರ ಕಟ್ಟೆಚ್ಚರದ ನಡುವೆ ಸೋಮವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಶೇ.55ರಷ್ಟು ಮತದಾನ ದಾಖಲಾಗಿದೆ. 

Advertisement

ಸೋಮವಾರ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರೊಂದಿಗೆ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಆದರೆ, ಚುನಾವಣೆಗಳಲ್ಲಿ ಕಂಡು ಬರುವಂತಹ ಉತ್ಸಾಹ ಕ್ಷೇತ್ರದ ಮತದಾರರಲ್ಲಿ ಕಾಣಲಿಲ್ಲ. ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರಿಗೆ ರಜೆ ಘೋಷಿಸಲಾಗಿದ್ದರೂ ಬಹುತೇಕರು ಮನೆಯಿಂದ ಹೊರಗೆ ಬರಲೇ ಇಲ್ಲ. ಕಳೆದ ಬಾರಿಗಿಂತ ಇಲ್ಲಿ ಶೇ.1.86ರಷ್ಟು ಕಡಿಮೆ ಮತದಾನವಾಗಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ. 56.82ರಷ್ಟು ಮತದಾನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next