Advertisement

54th IFFI: ಪ್ರೀಮಿಯರ್‌ ಶೋನಲ್ಲಿ ವಿಜಯ ರಾಘವೇಂದ್ರ ಅಭಿನಯದ “ಗ್ರೇ ಗೇಮ್ಸ್‌ ಗಾಲಾ”

10:04 AM Nov 20, 2023 | Team Udayavani |

ಪಣಜಿ, ನ. 20: ಚಿತ್ರೋತ್ಸವದ ವಿಶೇಷ ಪ್ರೀಮಿಯರ್‌ಗಳು [ಗಾಲಾ] ಚಿತ್ರೋತ್ಸವದ ಗಮನವನ್ನು ಸೆಳೆಯತೊಡಗಿವೆ.ಈ ಪ್ರಯತ್ನ ಎರಡನೇ ವರ್ಷದ್ದು. 2022ರಿಂದ ಗಾಲಾ ಪ್ರೀಮಿಯರ್‌ಗಳೆಂಬ ವಿಭಾಗ ಆರಂಭವಾಗಿತ್ತು.

Advertisement

ಈ ಬಾರಿಯ ಗಾಲಾ ಪ್ರೀಮಿಯರ್‌ಗಳಲ್ಲಿ ಖ್ಯಾತ ನಟರಾದ ಸಲ್ಮಾನ್‌ ಖಾನ್‌ ನಿರ್ಮಿಸಿ ಅರವಿಂದ್ ಸ್ವಾಮಿ, ವಿಜಯ್‌ ಸೇತುಪತಿ ಹಾಗೂ ಅದಿತಿ ರಾವ್‌ ಹೈದರಿ ಅಭಿನಯದ ಗಾಂಧಿ ಟಾಕ್ಸ್‌ [ಸೈಲೆಂಟ್‌] ಸಿನಿಮಾ ಇದೆ. ಇನ್ನೊಂದು ವಿಶೇಷವೆಂದರೆ ವಿಜಯ ರಾಘವೇಂದ್ರ ಅಭಿನಯಿಸಿರುವ ಗ್ರೇ ಗೇಮ್ಸ್‌ ಸಹ ಇಲ್ಲಿ ಪ್ರದರ್ಶನಗೊಳ್ಳುತ್ತಿದೆ. ಗಂಗಾಧರ ಸಾಲಿಮಠ್‌ ನಿರ್ದೇಶಿಸಿರುವ ಸಿನಿಮಾ ಆನ್‌ಲೈನ್‌ ಗೇಮ್ಸ್‌ಗಳ ಕುರಿತಾಗಿ ಇದೆ. ಆದರೆ ಅದನ್ನು ಒಂದು ಎಳೆಯಾಗಿಟ್ಟುಕೊಂಡು ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ಇದಲ್ಲದೇ ಪಂಕಜ್ ತ್ರಿಪಾಠಿ ಮತ್ತು ಪಾರ್ವತಿ ತ್ರಿವೋತ್ ಅಭಿನಯದ ಖಡಕ್ ಸಿಂಗ್ (ಹಿಂದಿ), ಸಿದ್ಧಾರ್ಥ್ ರಂಧೇರಿಯಾ ನಟಿಸಿದ ಹರೀ ಓಂ ಹರೀ ಗುಜರಾತಿ ಸಿನಿಮಾ, ನವಾಜುದ್ದೀನ್ ಸಿದ್ದಿಕಿ ಅಭಿನಯದ ಹಿಂದಿ ಸಿನಿಮಾ ರೌತು ಕಿ ಬೇಲಿಯೊಂದಿಗೆ ನಾಗ ಚೈತನ್ಯ, ಪಾರ್ವತಿ ತಿವ್ರೋತ್‌ ಅಭಿನಯದ ದೂತ್‌ ಹಾಗೂ ಆರ್ಯ ಅಭಿನಯದ ತಮಿಳು ಸರಣಿ ದಿ ವಿಲೇಜ್‌ ಸಹ ಪ್ರದರ್ಶನಗೊಳ್ಳುತ್ತಿದೆ. ಈ ಎರಡೂ ಸರಣಿಗಳನ್ನು ಆಮೆಜಾನ್‌ ನಿರ್ಮಿಸಿದೆ. ಇದಲ್ಲದೇ ಏಷ್ಯಾ ಪ್ರೀಮಿಯರ್‌ಗಳಲ್ಲಿ ಅಕ್ಷಯ್ ಒಬೆರಾಯ್ ಮತ್ತು ಊರ್ವಶಿ ರೌಟೇಲಾ ಅಭಿನಯದ ಹಿಂದಿ ಸಿನಿಮಾ ದಿಲ್ ಹೈ ಗ್ರೇ, ಹಾಗೂ ತಾರ್ಸೆಮ್ ಸಿಂಗ್ ಅವರ ಪಂಜಾಬಿ ಸಿನಿಮಾ ಡಿಯರ್ ಜಸ್ಸಿ (ಪಂಜಾಬಿ) ಪ್ರದರ್ಶನಗೊಳ್ಳಲಿವೆ. ಸೌಮೇಂದ್ರ ಪದಿ ನಿರ್ದೇಶಿಸಿದ ಹಿಂದಿ ಚಲನಚಿತ್ರ ’ಫ್ಯಾರಿ’ ಸಹ ಪ್ರದರ್ಶನಗೊಳ್ಳಲಿದೆ.

ಕರಣ್ ಜೋಹರ್ ಮತ್ತು ಸಾರಾ ಅಲಿ ಖಾನ್ ನಡುವಿನ ಸಂಭಾಷಣೆಯೊಂದಿಗೆ ಚಿತ್ರ ಏ ವತನ್ ಮೇರೆ ವತನ್ ನ ವಿಶೇಷ ಪ್ರದರ್ಶನವೂ ಇದೆ.

ಈ ಬಾರಿಯ ಗಾಲಾ ಪ್ರೀಮಿಯರ್‌ನಲ್ಲಿ ದೇಶದ ಹಿಂದಿಗಳ ಜತೆಗೆ ಕನ್ನಡ, ತೆಲುಗು ಹಾಗೂ ತಮಿಳಿನ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಎರಡು ವೆಬ್‌ ಸೀರಿಸ್‌ಗಳು,

Advertisement

ಸೌಮೇಂದ್ರ ಪಾಡಿ ನಿರ್ದೇಶನದ “ಫ್ಯಾರಿ”, ರೋಮಾಂಚಕತೆಯನ್ನು ತುಂಬಿದರೆ, ಕಿಶೋರ್ ಪಾಡುರಂಗ ಬೇಲೇಕರ್ ಅವರ “ಗಾಂಧಿ ಟಾಕ್ಸ್” ಬಂಡವಾಳಶಾಹಿ, ವರ್ಣಭೇದ ನೀತಿ ಮತ್ತಿತರ ಸಂಗತಿಗಳ ಕುರಿತ ಚಿತ್ರ, ಅನಿರುದ್ಧ ರಾಯ್ ಚೌಧರಿ ನಿರ್ದೇಶನದ “ಕಡಕ್ ಸಿಂಗ್” ಚಲನಚಿತ್ರವು ಅಧಿಕಾರಶಾಹಿ, ಆರ್ಥಿಕ ಅಪರಾಧಗಳು ಇತ್ಯಾದಿ ನೆಲೆಯಲ್ಲಿ ಸಾಗುವಂಥದ್ದು. ಮಿಲಿಂದ್ ರಾವು ನಿರ್ದೇಶಿಸಿದ “ದಿ ವಿಲೇಜ್” ಸ್ವಲ್ಪ ವಿಭಿನ್ನವಾದ ಕಥಾವಸ್ತು ಇರುವಂಥದ್ದು. ಒಂದು ಊರಿನೊಳಗಿನ ಭಯಾನಕ ಅಂತರಂಗವನ್ನು ತೆರೆದಿಡುವಂಥದ್ದು. ಕುತೂಹಲವೆನಿಸುವ ಚಿತ್ರವೆಂಬ ಅಭಿಪ್ರಾಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next